ಇದು ಮಣ್ಣಿನ ಗಣೇಶ ಅಲ್ಲ, ಪಿಒಪಿ ಗಣೇಶನೂ ಅಲ್ಲ, ತಿನ್ನುವ ಟೇಸ್ಟಿ ಟೇಸ್ಟಿ ಗಣೇಶ….

ಇಕೋ ಫ್ರಂಡ್ಲಿ ಗಣೇಶ ತಯಾರಿಸಬೇಕು, ಅದನ್ನೇ ಪೂಜೆ ಮಾಡಬೇಕು ಇದರಿಂದ ಪರಿಸರಕ್ಕೆ ಕಡಿಮೆ ಪ್ರಮಾಣದ ಹಾನಿಯುಂಟಾಗುತ್ತದೆ. ಆದರೆ ಕಡಿಮೆ ಪ್ರಮಾಣದ  ಹಾನಿ ಕೂಡ ಪರಿಸರಕ್ಕೆ ಆಗಬಾರದು. ಅಂಥಹ ಗಣೇಶ ತಯಾರಿ ಮಾಡಬೇಕು ಅಂದ್ರೆ ಹೇಗೆ..?

ಅದಕ್ಕೆ ರೆಸ್ಟೋರೆಂಟ್ ಮಾಲೀಕರೊಬ್ಬರು ಒಂದು ಪ್ಲಾನ್ ಮಾಡಿ ಗಣೇಶ ತಯಾರಿಸಿದ್ದಾರೆ. ಅದು ಯಾವುದರಿಂದ ಗೊತ್ತಾ..? ಚಾಕಲೇಟ್ ನಿಂದ..

ಹೌದು..  ಬರೋಬ್ಬರಿ 100 ಕೆಜಿ ಬೆಲ್ಜಿಯನ್ ಚಾಕ್ಲೇಟ್ ನಿಂದ ತಯಾರಿಸಿದ ಗಣೇಶ ಮೂರ್ತಿ ಇದು…! ರೆಸ್ಟೋರೆಂಟ್ ಮಾಲೀಕ ಹಾಗೂ ಚಾಕ್ಲೇಟ್ ತಯಾರಕರಾದ ಹರ್ಜಿಂದರ್ ಸಿಂಗ್ ಕುಕ್ರೇಜಾ ಅವರು ಟ್ವಿಟರ್ ನಲ್ಲಿ ಈ ಚಾಕ್ಲೇಟ್ ಗಣೇಶ ಮೂರ್ತಿಯ ಫೋಟೋವನ್ನು ಶೇರ್ ಮಾಡಿದ್ದು, ನೆಟ್ಟಿಗರಿಂದ ಸಾಕಷ್ಟು ಮೆಚ್ಚುಗೆ ಪಡೆದಿದೆ.

ಈ ವಿಶೇಷ ಚಾಕ್ಲೇಟ್ ಅನ್ನು ತಯಾರಿಸಲು 20 ಚೆಫ್ ಗಳು ಸತತ 10 ದಿನಗಳನ್ನು ತೆಗೆದುಕೊಂಡಿದ್ದಾರೆ. ಇದಕ್ಕಾಗಿ 100 ಕೆಜಿಯಷ್ಟು ಬೆಲ್ಜಿಯನ್ ಚಾಕ್ಲೇಟ್ ಅನ್ನು ಬಳಸಲಾಗಿದೆ ಎಂಬ ಮಾಹಿತಿಯನ್ನು ಸಿಂಗ್ ನೀಡಿದ್ದಾರೆ.

ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಈ ಚಾಕ್ಲೇಟ್ ಗಣಪನನ್ನು ತಯಾರಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಸಾಕಷ್ಟು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಿಂಗ್ ಅವರ ಈ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Leave a Reply