ಇನ್ಮುಂದೆ ದೋಷಪೂರಿತ ಎಟಿಎಂ ಬಳಕೆಗೆ ಚಾರ್ಜ್ ಇಲ್ಲ – RBI ಸ್ಪಷ್ಟನೆ

ಉಚಿತ ಎಟಿಎಂ ವಹಿವಾಟು ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟೀಕರಣ ನೀಡಿದೆ. ಎಟಿಎಂ ವೈಫಲ್ಯ ಅಥವಾ ಎಟಿಎಂನಲ್ಲಿ ಹಣ ಕೊರತೆಯಿದ್ದಲ್ಲಿ ಅಥವಾ ವಹಿವಾಟಿನ ವೇಳೆ ಗ್ರಾಹಕರಿಗೆ ಎಟಿಎಂನಿಂದ ಹಣ ಬರದೆ ಹೋದ್ರೆ ಅಂತ ವಹಿವಾಟನ್ನು ಪ್ರತಿ ತಿಂಗಳು ಬ್ಯಾಂಕ್ ನೀಡುವ ಉಚಿತ ವಹಿವಾಟಿನಲ್ಲಿ ಸೇರಿಸಿ ಎಂದು ಆರ್.ಬಿ.ಐ. ಹೇಳಿದೆ.

ಆರ್.ಬಿ.ಐ. ಸುತ್ತೋಲೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಎಟಿಎಂನಲ್ಲಿ ಹಣ ಕೊರತೆಯಿದ್ದರೆ, ಪಿನ್ ಅಥವಾ ಬೇರೆ ಸಮಸ್ಯೆಗಳಿಂದ ಹಣ ಬರದೆ ಹೋದ್ರೂ ಅಂಥಹ ವಹಿವಾಟನ್ನು ಉಚಿತ ವಹಿವಾಟಿಗೆ ಸೇರಿಸಲಾಗ್ತಿದೆ. ಇಂಥ ವಹಿವಾಟನ್ನು ಮಾನ್ಯ ವಹಿವಾಟೆಂದು ಪರಿಗಣಿಸಬೇಡಿ. ಹಾಗೆ ಇದ್ರ ಮೇಲೆ ಯಾವುದೇ ಚಾರ್ಜ್ ಹಾಕಬೇಡಿ ಎಂದು ಆರ್.ಬಿ.ಐ. ಹೇಳಿದೆ.

ಎಟಿಎಂ ಬಳಕೆದಾರರಿಗೆ ಪ್ರತಿ ತಿಂಗಳು 5 ವಹಿವಾಟು ಉಚಿತವಾಗಿರುತ್ತದೆ. ಉಳಿದ ವಹಿವಾಟಿಗೆ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಈವರೆಗೆ ವಿಫಲ ವಹಿವಾಟನ್ನು ಬ್ಯಾಂಕ್ ಮಾನ್ಯ ವಹಿವಾಟಿನ ಪಟ್ಟಿಗೆ ಸೇರಿಸುತ್ತಿತ್ತು. ಇದ್ರಿಂದ ಗ್ರಾಹಕರಿಗೆ ನಷ್ಟವಾಗ್ತಿತ್ತು.

Leave a Reply