ಇವನೆಂಥ ಗಂಡ..? : ಪತ್ನಿಯನ್ನು ಕೊಲೆ ಮಾಡಿ ದೇಹವನ್ನು ಆಚೆ ಎಸೆದ ಪಾಪಿ ಪತಿ

ಮದ್ಯಪಾನಿಗಳಿಗೆ ಒಮ್ಮೊಮ್ಮೆ ಮದ್ಯದ ಅಮಲು ನೆತ್ತಿಗೇರಿದರೆ ತಾವು ಏನನ್ನು ಮಾಡುತ್ತಿದ್ದೇವೆ ಎಂಬ ಪರಿವೆಯೇ ಇರುವುದಿಲ್ಲ.

ಹೀಗೆ ಕಂಠಪೂರ್ತಿ ಕುಡಿದು ಬಂದವನೊಬ್ಬ ಮಕ್ಕಳ ಶಾಲೆ ಫೀಸ್ ಕಟ್ಟಲು ಕೂಡಿಟ್ಟ ಹಣವನ್ನು ಕೊಡಲಿಲ್ಲ ಎಂಬ ಕಾರಣಕ್ಕೆ ಹೆಂಡತಿಯನ್ನು ಕೊಲೆ ಮಾಡಿ, ಆಕೆಯ ಶವವನ್ನು ಮನೆಯ ಛಾವಣಿಯಿಂದ ಕೆಳಗೆ ಎಸೆದಿದ್ದಾನೆ.

ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಮುಂಬೈನ ಗೋರೆಗಾಂವ್ ಪ್ರದೇಶದಲ್ಲಿ.

ತನ್ನ ಗಂಡನ ಕುಡಿತದ ಚಟದ ಹಿನ್ನೆಲೆಯಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಮತ್ತು ಮನೆಯ ಖರ್ಚಿಗೆಂದು ಪತ್ನಿ ಅಲ್ಪಸ್ವಲ್ಪ ಹಣವನ್ನು ಕೂಡಿಟ್ಟಿದ್ದಳು. ಇದನ್ನು ನೀಡುವಂತೆ ಆತ ಪೀಡಿಸಿದ್ದಾನೆ. ಆದರೆ, ಹಣ ಕೊಡಲು ನಿರಾಕರಿಸಿದಾಗ ಆಕೆಯನ್ನು ಕೊಲೆ ಮಾಡಿದ್ದಾನೆ.

ಆದರೆ, ಈ ಚಾಲಾಕಿ ಕುಡುಕ ತನ್ನ ಮೇಲೆ ಅಪವಾದ ಬರುತ್ತದೆ ಎಂದು ಯೋಚಿಸಿದವನೇ, ಪತ್ನಿಯ ಶವವನ್ನು ಮನೆಯ ಮೇಲ್ಛಾವಣಿಯಿಂದ ಕೆಳಗೆ ಎಸೆದು ಆತ್ಮಹತ್ಯೆ ಮಾಡಿಕೊಂಡಳು ಎಂದು ಬಿಂಬಿಸಲು ಹೊರಟಿದ್ದಾನೆ. ಆದರೆ, ತನಿಖೆ ನಡೆಸಿದ ಪೊಲೀಸರು ನಿಜವಾದ ವಿಷಯವನ್ನು ಅವನಿಂದ ಬಾಯ್ಬಿಡಿಸಿದ್ದಾರೆ.

Leave a Reply