‘ಈಗಿರುವ ಸರ್ಕಾರ ನಂದು’ ಹಾಲಿ ಹಾಗೂ ಮಾಜಿ ಸಚಿವರ ನಡುವೆ ಶಾಕಿಂಗ್ ಡೈಲಾಗ್…!

ಮೈಸೂರಿನಲ್ಲಿ ಪಾದಯಾತ್ರೆ ವೇಳೆ ಸೋಮಣ್ಣ ತನ್ವೀರ್ ನಡುವೆ ಮಾತುಕತೆಯಲ್ಲಿ ಹಾಲಿ ಹಾಗೂ ಮಾಜಿ ಸಚಿವರ ನಡುವೆ ಶಾಕಿಂಗ್ ಡೈಲಾಗ್ ಹೊಡೆದಿದ್ದಾರೆ.

ಸಚಿವ ವಿ.ಸೋಮಣ್ಣ ಗೆ ಮಾಜಿ ಸಚಿವ ತನ್ವೀರ್ ಸೇಠ್ ಶಾಕಿಂಗ್ ಡೈಲಾಗ್ ಹೊಡೆದಿದ್ದಾರೆ. ನಮ್ ಶಾಸಕರನ್ನ ಕಟ್ಟಿಹಾಕ್ದೇ ಇದ್ದಿದ್ರೆ ನಿಮ್ ಸರ್ಕಾರ ಬರ್ತಿತ್ತಾ …? ಅಂತ ತನ್ವೀರ್ ಸೇಠ್ ಪ್ರಶ್ನೆ ಮಾಡಿದ್ದಾರೆ.

ಪಾದಯಾತ್ರೆ ವೇಳೆ ಹಾಲಿ ಸಚಿವ ಸೋಮಣ್ಣರಿಗೆ ಮಾಜಿ ಸಚಿವ ತನ್ವೀರ್ ಸೇಠ್ ಡೈಲಾಗ್ ಹೊಡೆದ ಮಾಜಿ ಸಚಿವ.

ನೀನು ಮಾಡದಿರುವ ಕೆಲಸ ಇದ್ರೆ ಹೇಳಪ್ಪ ಎಂದ ಸಚಿವ ಸೋಮಣ್ಣನ ಮಾತಿಗೆ ತನ್ವೀರ್ ಸೇಠ್ ಕ್ಷಣಕಾಲ ತಬ್ಬಿಬ್ಬು ಆಗಿಬಿಟ್ಟರು. ನಂತರ ಎಚ್ಚೆತ್ತುಕೊಂಡ ತನ್ವೀರ್ ಸೇಠ್  ಈ ಸರ್ಕಾರ ನಂದು ಎಂದು ರಿವರ್ಸ್ ಡೈಲಾಗ್ ಹೊಡೆದಿದ್ದಾರೆ.

ಈ ಮೊದಲು ತನ್ವೀರ್ ಸೇಠ್ ಪ್ರತ್ಯಕ್ಷವಾಗುತ್ತಿದ್ದಂತೆಯೇ ಆಲಿಂಗಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಸಚಿವ ಸೋಮಣ್ಣ,  ಆರತಿ ತಗೊಂಡು ಬನ್ರಪ್ಪಾ ಎಂದು ಕಾರ್ಯಕರ್ತರನ್ನ ಕರೆದು ಹಾಸ್ಯ ಮಾಡಿದರು.
ಇವರಪ್ಪ ಅಜೀಜ್ ಸೇಠ್ ನಮ್ಮ ಲೀಡರ್ ಇವನಲ್ಲ ಎಂದ ಸೋಮಣ್ಣ, ಆ ಸಂಬಂಧ ಇಲ್ಲದಿದ್ರೆ ಇಲ್ಲಿಗೆ ಬರೋಕ್ಕೆ ಆಗ್ತಿತ್ತ ಎಂದ ತನ್ವೀರ್ ಸೇಠ್ ಎಂದರು.

Leave a Reply