ಈ ವಾರ ‘ಚಕ್ರವ್ಯೂಹ’ ದಲ್ಲಿ ಪವರ್ ಫುಲ್ ಖದರ್ !

_MG_8441 _MGL0567

ಬಹಳ ದಿನಗಳಿಂದ ಪವರ್ ಸ್ಟಾರ್ ಅಭಿಮಾನಿಗಳ ನಿದ್ದೆ ಕೆಡಿಸಿದ್ದ ಚಕ್ರವ್ಯೂಹ ಕೊನೆಗೂ ಥಿಯೇಟರ್ ಅಂಗಳಕ್ಕೆ ಇಳಿಯುವುದಕ್ಕೆ ಸಜ್ಜಾಗಿದೆ. ಈಗಾಗಲೇ ಹಾಡುಗಳಿಂದಲೇ ಪುನೀತ್ ಅಭಿಮಾನಿಗಳ ಮನಗೆದ್ದಿರುವ ಚಿತ್ರಕ್ಕೆ ಟಾಲಿವುಡ್ ಸ್ಟಾರ್ಸ್ ಸಾಥ್ ಕೊಟ್ಟಿದ್ದಾರೆ. ಜ್ಯೂ.ಎನ್ ಟಿ ಆರ್ ಮೊಟ್ಟ ಮೊದಲಬಾರಿಗೆ ಹಾಡಿರುವ ‘ಗೆಳೆಯ ಗೆಳೆಯ’ ಹಾಡು ವೈರಲ್ ಆಗಿದೆ.  ಅಲ್ಲದೆ ಕಾಜಲ್ ಅಗರ್ವಾಲ್ ಕೂಡ ರಚಿತಾರಾಮ್ ಗೆ ಧ್ವನಿಯಾಗಿರುವ ಮತ್ತೊಂದು ವಿಶೇಷ.

ಚಕ್ರವ್ಯೂಹ ಸಿನಿಮಾದ ಹೈಲೈಟ್ ಅಂದರೆ, ಪುನೀತ್ ಹಾಗು ರಚಿತರಾಮ್ ಕಾಂಬಿನೇಷನ್. ಇದೇ ಮೊದಲ ಬಾರಿಗೆ ಇಬ್ಬರು ತೆರೆಮೇಲೆ ರೊಮಾನ್ಸ್ ಮಾಡಿದ್ದಾರೆ. ಹೀಗಾಗಿ ಇಬ್ಬರ ಅಭಿಮಾನಿಗಳಿಗೂ ಈ ಚಿತ್ರ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಇದರ ಒಂದಿಷ್ಟು ಝಲಕ್ ಇಲ್ಲಿದೆ ನೋಡಿ.

_MGL0799 _MGL0833 _MGL0755 _MGL0531
ಅಂದಹಾಗೆ ಎನ್.ಕೆ.ಲೋಹಿತ್ ಅವರು ನಿರ್ಮಿಸಿರುವ ‘ಚಕ್ರವ್ಯೂಹ’ ಚಿತ್ರ ಆಗಾಗ ಬಿಡುಗಡೆ ತಯಾರಿ ನಡೆಸಿದ್ದರೂ, ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಕೊನೆಗೂ ಅಡೆತಡೆಗಳನ್ನ ಬದಿಗೊತ್ತಿ  ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಮ್.ಸರವಣನ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಷಣ್ಮುಗ ಸುಂದರಂ ಅವರ ಛಾಯಾಗ್ರಹಣವಿದೆ.

ಚಕ್ರವ್ಯೂಹಕ್ಕೆ ಖ್ಯಾಚಿ ಟ್ಯೂನ್ ಗಳನ್ನ ಹಾಕಿದ್ದಾರೆ  ಎಸ್.ಎಸ್.ತಮನ್. ಅಲ್ಲದೆ ಸುಬಾರಕ್ ಸಂಕಲನ, ಶೋಭಿ, ಶೇಖರ್ ನೃತ್ಯ ನಿರ್ದೇಶನ ಮಾಡಿದ್ದು, ಸ್ಟಂಟ್ ಶಿವ ಸಾಹಸ ನಿರ್ದೇಶನವಿದೆ.  ಎಲ್ಲಕ್ಕಿಂತ ಹೆಚ್ಚಾಗಿ ಈ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಹಾಗೇ ಕವಿರಾಜ್, ಚಂದನ್ ಶೆಟ್ಟಿ ಸಾಹಿತ್ಯ ರಚಿಸಿದ್ದು, ಹಾಡುಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಇನ್ನು  ಪವರ್‌ಸ್ಟಾರ್ ಪುನೀತ್‌ರಾಜಕುಮಾರ್ ನಾಯಕರಾಗಿ ನಟಿಸಿರುವ ಈ ಚಿತ್ರದಲ್ಲಿ ರಂಗಾಯಣ ರಘು, ಸಾಧುಕೋಕಿಲ, ಅರುಣ್ ವಿಜಯ್, ಅಭಿಮನ್ಯು ಸಿಂಗ್, ಸಿತಾರಾ, ಭವ್ಯ ಮುಂತಾದವರು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಪವರ್ ಸ್ಟಾರ್ ಗೆ ಇದು 24 ನೇ ಚಿತ್ರ. ಹೀಗಾಗಿ ಅವರ ಅಭಿಮಾನಿಗಳ ನಿರೀಕ್ಷೆ ಜೋರಾಗೇ ಇದೆ. ಒಂದು ವೇಳೆ ಚಕ್ರವ್ಯೂಹದ ಗೆದ್ದರೆ ಪುನೀತ್ ಪವರ್ ಬಂದಂತೆ.. ಅದೇ ಸೋತರೆ ಸ್ವತ: ಚಕ್ರವ್ಯೂಹದೊಳಗೆ ಸಿಕ್ಕಿಕೊಂಡಂತೆಯೇ ಸರಿ

Comments are closed.