ಉತ್ತಮ ಆರೋಗ್ಯಕ್ಕೆ ಪೌಷ್ಠಿಕ ಆಹಾರ ಸೇವನೆ : ಗಾಂಧಿ ಸೂತ್ರ ಫಾಲೋ ಮಾಡಿದರೆ ಆರೋಗ್ಯ ಸ್ಟ್ರಾಂಗ್

ಗಾಂಧೀಜಿ ಅವರ ಜೀವನ ಶೈಲಿಯಿಂದ ನಾವು ಸಾಕಷ್ಟು ಕಲಿಯಬೇಕಿದೆ. ಹಾಗಾದ್ರೆ ಅವರ ಜೀವನ ಶೈಲಿ ಹೇಗಿತ್ತು ಅನ್ನೋದರ ಬಗ್ಗೆ ನಾವು ಹೇಳುತ್ತೇವೆ ಕೇಳಿ.

ಆಹಾರ ಬುದ್ಧಿಯನ್ನು ಚುರುಕಾಗಿಡುತ್ತದೆ. ಆರೋಗ್ಯಕರ ಜೀವನಕ್ಕೆ ಆರೋಗ್ಯಕ್ಕೆ ಆಹಾರ ಸೇವನೆ ಅಗತ್ಯವಾಗಿ ಸೇವಿಸಬೇಕು ಅನ್ನೋದು ಗಾಂಧಿಜೀಯವರ ಧ್ಯೆಯವಾಗಿತ್ತು. ಹಾಗಾದ್ರೆ ಗಾಂಧಿಜಿ ಅವರ ಆಹಾರ ಪದ್ಧತಿ ಹೇಗಿತ್ತು ನೀವೇ ನೋಡಿ…

ಮೇಕೆ ಹಾಲು :-

ಗಾಂಧಿಜೀ ಅವರು ಮೇಕೆ ಹಾಲು ಕುಡಿಯುತ್ತಿದ್ದರು. ಫ್ಯಾಟ್ ಕಡಿಮೆ ಇರುವ ಈ ಹಾಲಲ್ಲಿ ಕ್ಯಾಲ್ಮಿಂ ಹೆಚ್ಚಾಗಿರುತ್ತದೆ. ಸಂಧಿವಾತಕ್ಕೆ ರಾಮಬಾಣ , ರೋಗ ನಿರೋಧಕ್ಕೆ ಶಕ್ತಿ ಹೆಚ್ಚಿಸುತ್ತದೆ. ಹೀಗಾಗಿ ಈ ಹಾಲನ್ನ ಗಾಂಧಿಜಿ ಕುಡಿಯುತ್ತಿದ್ದರು.

ಹಣ್ಣು ಮತ್ತು ತರಕಾರಿಗಳು:-

ಗಾಂಧಿಜಿಯವರಿಗೆ ಹಣ್ಣು ಹಾಗೂ ತರಕಾರಿಗಳು ಅಂದರೆ ತುಂಬಾ ಇಷ್ಟ. ಆಯಾ ಋತುಗಳಲ್ಲಿ ಸಿಗುವ ಹಣ್ಣು ತರಕಾರಿಗಳನ್ನು ಅವರು ಸೇವಿಸುತ್ತಿದ್ದರು. ಇದು ಗಾಂಧಿಜೀ ಹೇಳಿ ಕೊಟ್ಟ ಪಾಠ. ಇದನ್ನ ಪಾಲಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ.

ಖಾರದ ಪದಾರ್ಥಗಳಿಂದ ದೂರ : –

ಖಾರದ ಆಹಾರದಿಂದ ಗಾಂಧಿಜಿ ದೂರವಿರುತ್ತಿದ್ದರು. ಸಕ್ಕರೆ ಬದಲಿಗೆ ಅವರು ಬೆಲ್ಲವನ್ನ ಸೇವಿಸ್ತಾಯಿದ್ದರು. ಮಸಾಲೆಭರಿತ ಆಹಾರಗಳಿಂದ ದೂರವಿದ್ದಷ್ಟು ಆರೋಗ್ಯ ಉತ್ತಮ ಎಂದು ಅವರು ಹೇಳ್ತಾಯಿದ್ದರಂತೆ.

ಮಾಂಸಹಾರದಿಂದ ದೂರ :-

ಮಾಂಸವನ್ನು ಯೌವನದಲ್ಲಿ ಸೇವಿಸುತ್ತಿದ್ದ ಗಾಂಧಿ ತದನಂತರದಲ್ಲಿ ಅದನ್ನ ಬಿಟ್ಟು ಪಕ್ಕಾ ಸಸ್ಯಹಾರಿಗಳಾದರು.

ನಿಯಮಿತವಾದ ನಡುಗೆ :-

ಇನ್ನೂ  ತಿಂದ ಆಹಾರ ಚೆನ್ನಾಗಿ ಜೀರ್ಣವಾಗಬೇಕಾದರೆ ಅದಕ್ಕೆ ತಕ್ಕಂತೆ ವ್ಯಾಯಾಮ ಕೂಡ ಅಗತ್ಯ. ಹೀಗಾಗಿ ಗಾಂಧಿಜೀ ಸಾಧ್ಯವಾದಾಗಲೆಲ್ಲಾ ನಡೆದುಕೊಂಡೇ ಓಡಾಡುತ್ತಿದ್ದರು.

ಮದ್ಯಪಾನ ಮತ್ತು ಧೂಮಪಾನ :-

ಯುವಕರಾಗಿದ್ದಾಗ ಮದ್ಯಪಾನ ಮಾಡುತ್ತಿದ್ದ ಗಾಂಧಿ ನಂತರ ಅದನ್ನು ಬಿಟ್ಟುಬಿಟ್ಟರು. ಗಾಂಧಿ ಸೂತ್ರ ಫಾಲೋ ಮಾಡಿದರೆ ಮಾನಸಿಕವಾಗಿ ಸ್ಟ್ರಾಂಗ್ ಆಗಬಹುದು.

ಗಾಂಧಿಜಿ ಅವರಿಗೆ ಇಷ್ಟವಾಘುವ ಫುಡ್ ಯಾವುದು..?

ರೈಸ್ ಆಂಡ್ ದಾಲ್ :- ಊಟಕ್ಕೆ ಇವೆರೆಡು ಇದ್ದರೆ ಗಾಂಧಿಜೀ ಅವರಿಗೆ ಸಾಕಾಗಿತ್ತು. ಬೇರೇನು ಬಯಸುತ್ತಿರಲಿಲ್ಲ.

ಚಪಾತಿ :- ಗುಜರಾತಿಯವರಾಗಿದ್ದರಿಂದ ಅವರಿಗೆ ಚಪಾತಿ ಅಂದರೆ ತುಂಬಾನೇ ಇಷ್ಟ ಮದ್ಯಾಹ್ನಕ್ಕೆ ಹೆಚ್ಚು ಬಳಸುತ್ತಿದ್ದರು.

ಮೊಸರು :- ಮೊಸರು ತಿಂದರೆ ಜೀರ್ಣಕ್ರಿಯೆಗೆ ಸುಲಭ ಹೀಗಾಗಿ ಅವರ ಆಹಾರದಲ್ಲಿ ಮೊಸರು ಇರುತ್ತಿತ್ತು.

ಬೀಟ್ ರೋಟ್ ಮತ್ತು ಮೂಲಂಗಿ : – ಉಪ್ಪು ಹಾಕದೇ ಬೇಯಿಸಿದ ಬೀಟ್ ರೋಟ್ ಮೂಲಂಗಿ ಹೆಚ್ಚು ಸೇವಿಸುತ್ತಿದ್ದರು.

ಸೋರೇಕಾಯಿ :-  ಹೆಚ್ಚು ಬೇಯಿಸಿದ ಸೋರೇಕಾಯಿ ಸೇವನೆ ಮಾಡುತ್ತಿದ್ದರು.

ಬದನೇಕಾಯಿ :- ಸುಟ್ಟ ಬದನೇಕಾಯಿ ಗಾಂಧಿಜಿ ಅವರಿಗೆ ತುಂಬಾನೇ ಇಷ್ಟ. ಹೀಗಾಗಿ ಊಟದಲ್ಲಿ ಸುಟ್ಟ ಬದನೆಕಾಯಿ ಸೇವಿಸ್ತಾಯಿದ್ದರು.

ಪೇಡ : – ಹಾಲಿನ ಪೇಡ ಗುಜರಾತಿಯಲ್ಲಿ ಫೇಮಸ್. ಹೀಗಾಗಿ ಗಾಂಧಿಜಿಯವರಿಗೂ ಕೂಡ ಇದ ಫೇವರೆಟ್.

ಹಣ್ಣಿನ ಜ್ಯೂಸ್ : ಉಪವಾಸ ಮಾಡುವ ವೇಳೆ  ಹೆಚ್ಚಾಗಿ ಜ್ಯೂಸಿನ ಮೊರೆ ಹೋಗುತ್ತಿದ್ದರು. ಸ್ನೇಹಿತರಿಗೂ ಇದನ್ನೇ ಸಲಹೆ ಮೂಡಿಸುತ್ತಿದ್ದರು.

ಒಟ್ಟಿನಲ್ಲಿ ಈ ರೀತಿ ಗಾಂಧಿಜಿ ಅವರು ಆಹಾರ ಪದ್ದತಿಯನ್ನು ಅನುಸರಿಸುತ್ತಿದ್ದರು. ತಾವಿಷ್ಟ ಪಡುವ ಆಹಾರವನ್ನು ಹೆಚ್ಚು ಇಷ್ಟಪಟ್ಟು ತಿನ್ನುತ್ತಿದ್ದರು.

 

Leave a Reply