ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕೆ.ಮುಕಂಡಪ್ಪ ಮನವಿ…

ಕುರುಬ ಜನಾಂಗದ ಮೂವರು ಅಭ್ಯರ್ಥಿಗಳನ್ಬು ಗೆಲ್ಲಿಸುವುದರ ಜೊತೆ ಉಳಿದ 12 ಮಂದಿ ಬಿಜೆಪಿ ಅಭ್ಯರ್ಥಿ ಗಳನ್ನು ಬೆಂಬಲಿಸಬೇಕೆಂದು ಕುರುಬ ಸಮಾಜದ ಹಿರಿಯ ಮುಖಂಡ, ಅಹಿಂದ ಅಧ್ತಕ್ಷ ಕೆ.ಮುಕಂಡಪ್ಪ ಮನವಿ ಮಾಡಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ವಿಶ್ವನಾಥ್ ಸೇರಿದಂತೆ ಎಲ್ಲರೂ ಸೇರಿ ಕಾಗಿನೆಲೆ ಮಠ ಕಟ್ಟಿದ್ದೇವು. ಆದರೆ ಸಿದ್ದರಾಮಯ್ಯ ಎಲ್ಲದ್ದನ್ನೂ ನಾನೇ ಮಾಡಿದ್ದು ಎಂದು ಹೇಳುತ್ತಾರೆ. ಸಿದ್ದರಾಮಯ್ಯ ಕೊಡುಗೆ ಸಮಾಜಕ್ಜೆ ಏನೂ ಇಲ್ಲ, ಎಂಟಿಬಿ ಸಮಾಜದ ಅನೇಕ ಕಾರ್ಯ ಗಳಿಗೆ ಸಹಾಯ ಮಾಡಿದ್ದಾರೆ. ಆದರೆ ಅವರ ಬಗ್ಗೆ ಕೀಳಾಗಿ ಮಾತನಾಡುವುದು ಸರಿಯಲ್ಲ, ಕುರುಬರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಆದರೆ ಸಿದ್ದರಾಮಯ್ಯ ಕುರಬರನ್ನು ಎಸ್ ಟಿಗೆ ಸೇರಿಸುವ ಪ್ರಯತ್ನ ವನ್ನು ಮಾಡಲಿಲ್ಲ, ಸಿದ್ದರಾಮಯ್ಯ ಸ್ವಾರ್ಥಕ್ಕಾಗಿ ಅಹಿಂದ ಬಳಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ರಾಷ್ಟ್ರೀಯ ಹಿಂದುಳಿದ ಆಯೋಗಕ್ಕೆ ಸಂವಿಧಾನ ತ್ಮಕ ಸ್ಥಾನಮಾನ ನೀಡಿದ್ದಾರೆ. ಹಿಂದುಳಿದ ವರ್ಗಕ್ಕೆ ದೇವರಾಜು ಅರಸು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರನ್ನು ದೇವರಾಜು ಅರಸು ಅವರಿಗೆ ಹೋಲಿಸುವುದು ಸರಿಯಲ್ಲ ಎಂದರು.ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಅಪರೂಪದ ವ್ಯಕ್ತಿಯಾಗಿದ್ದು. ಕನಕದಾಸರ ಜಯಂತಿ ದಿನ ಘೋಷಣೆ ಮಾಡಿ ಕುರುಬ ಜನಾಂಗಕ್ಕೆ ನ್ಯಾಯ ಒದಗಿಸಿದ್ದಾರೆ ಎಂದು ತಿಳಿಸಿದರು.

Leave a Reply