ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಕೊರತೆ ಉಪಚುನಾವಣೇಲಿ ಸೋಲಿಗೆ ಕಾರಣ – DKS..

ರಾಜ್ಯದ 15 ಸ್ಥಾನಗಳಿಗೆ ಡಿಸೆಂಬರ್‍ ತಿಂಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಕಳಪೆ ಪ್ರದರ್ಶನಕ್ಕೆ ಮಾಜಿ ಸಚಿವ ಡಿಕೆ. ಶಿವಕುಮಾರ್‍ ಕಾರಣ ಬಿಚ್ಚಿಟ್ಟಿದ್ದಾರೆ. ಕೈ-ದಳ ಮೈತ್ರಿ ಆಗಿದ್ದಿದ್ದರೇ ಬಿಜೆಪಯ ಗೆಲುವನ್ನು ತಪ್ಪಿಸಬಹುದಿತ್ತು ಎಂಬರ್ಥದಲ್ಲಿ ಅವರು ವ್ಯಾಖ್ಯಾನಿಸಿದ್ದಾರೆ.


ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸೂಕ್ತ ಸಂಯೋಜಿತ ರಣತಂತ್ರ ಹೆಣೆದಿದ್ದಿದ್ದರೇ ಫಲಿತಾಂಶವೇ ಬೇರೆ ಇರುತ್ತಿತ್ತು. ಆದರೆ ಎರಡೂ ಪಕ್ಷಗಳು ಈ ನಿಟ್ಟಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳದ ಕಾರಣ ಪಕ್ಷಾಂತರ ಮಾಡಿದವರು ಚುನಾವಣೆ ಗೆಲ್ಲುವಂತಾಯಿತು ಎಂದು ಡಿಕೆಶಿ ಹೇಳಿದ್ದಾರೆ.

ಈ ಮಧ್ಯೆ ರಾಮನಗರದಲ್ಲಿ ಆರೆಸ್ಸೆಸ್‌ನ ಪಥಸಂಚಲನದ ಬಗ್ಗೆಯೂ ಡಿಕೆಶಿ ಪ್ರತಿಕ್ರಯಿಸಿದ್ದು, ಇದಕ್ಕೆಲ್ಲ ತಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಅವರು (ಆರೆಸ್ಸೆಸ್) ಚಡ್ಡಿಯಾದರೂ ಹಾಕಿಕೊಳ್ಳಲಿ, ಪ್ಯಾಂಟ್ ಆದ್ರೂ‌ ಹಾಕಿ ಕೊಳ್ಳಲಿ, ಪಂಚೆಯಾದ್ರೂ ಹಾಕಿಕೊಳ್ಳಲಿ ಏನ್ ಬೇಕಾದ್ರೂ ಮಾಡ್ಕೊಳ್ಳಲಿ. ನಮ್ಮ ರಾಜಕೀಯ ನಾವು ಮಾಡುತ್ತೇವೆ. ಪಥ ಸಂಚಲನಕ್ಕೆ ಬರೋರಿಗೆ ಊಟದ ವ್ಯವಸ್ಥೆ ಮಾಡ್ತೀನಿ ಎಂದಿದ್ದಾರೆ.

ಇದೇ ವೇಳೆ ಪಥಸಂಚಲನಕ್ಕೆ ಜನ ಎಲ್ಲಿಂದ ಬರುತ್ತಿದ್ದಾರೆ ಎಂಬ ಮಾಹಿತಿ ಇದೆ. ಪಥ ಸಂಚಲನವಾದರೂ ಮಾಡಲಿ ಇಲ್ಲವೇ , ಉರುಳು ಸೇವೆ ಮಾಡಲಿ. ನಮ್ಮ ಅಭ್ಯಂತರವೇನಿಲ್ಲ ಎಂದು ಶಿವಕುಮಾರ್‍ ಮೂದಲಿಸಿದ್ದಾರೆ.