ಎರಡು ದಿನದ ಹಿಂದೆ ಕಾಲುವೆ ನೀರಲ್ಲಿ ಕೊಚ್ಚಿ ಹೋಗಿದ್ದ ಬಾಲಕನ ಶವ ಪತ್ತೆ …!

ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದಲ್ಲಿ ಎರಡು ದಿನದ ಹಿಂದೆ ನೀರಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಶವವಾಗಿ ಪಟ್ಟಣದ ತಾಲೂಕು ಕ್ರೀಡಾಂಗಣದ ದ್ಯಾಮಪ್ಪನ ಒಡ್ಡಿನ ಬಳಿ ಪತ್ತೆಯಾಗಿದ್ದಾರೆ.

ಸೊಯಬ್ ರಾಣೆಬೆನ್ನೂರು (13) ವರ್ಷದ ಬಾಲಕ ಕಾಲುಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದ. ಬಾಲಕನಿಗಾಗಿ ಶೋಧ ಕಾರ್ಯ ನಡೆಸಿದ್ದ ಅಗ್ನಿಶಾಮಕ ಸಿಬ್ಬಂದಿ, ಮುಳಗು ತಜ್ಞರಿಗೆ ಎರಡು ದಿನಗಳ ಬಳಿಕ ಬಿದ್ದ ಸ್ಥಳದಿಂದ ಎರಡು ಕಿಮೀ ದೂರದಲ್ಲಿ ಮುಳ್ಳಿನ ಪೊದೆಯಲ್ಲಿ ಪತ್ತೆಯಾದ ಮೃತದೇಹ ಪತ್ತೆಯಾಗಿದೆ.

ಬಾಲಕನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳದಲ್ಲಿ ಮಾಜಿ ಶಾಸಕ ಯು ಬಿ ಬಣಕಾರ ಕೂಡ ಹಾಜರ್,  ಮೃತ ಬಾಲಕನ ಪೋಷಕರಿಗೆ ದೈರ್ಯ ತುಂಬುತ್ತಿದ್ದಾರೆ.

Leave a Reply