ಎರಡು ರೈಲುಗಳು ಮುಖಾಮುಖಿ ಡಿಕ್ಕಿ : ಚಾಲಕ ಸೇರಿ ಸುಮಾರು 6 ಮಂದಿಗೆ ಗಾಯ

ನಿಲ್ದಾಣದಲ್ಲಿಯೇ ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾದ ಘಟನೆ ಹೈದರಾಬಾದ್ ನ ಕಾಚಿಗುಡದಲ್ಲಿ ಇಂದು ಬೆಳಗ್ಗೆ 10.30ರ ಸುಮಾರಿಗೆ ನಡೆದಿದೆ.

ಕರ್ನೂಲ್ ಕಡೆಯಿಂದ ಬರುತ್ತಿದ್ದ ಹುಂಡ್ರಿ ಇಂಟರ್ಸಿಟಿ ಹಾಗೂ ಹೈದರಾಬಾದಿನ ಎಂಎಂಟಿಎಸ್(ಮಲ್ಟ್ ಮೊಡಲ್ ಟ್ರಾನ್ಸ್ ಪೋರ್ಟ್ ಸಿಸ್ಟಮ್) ಮಧ್ಯೆ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೊಳಗಾದ ಎರಡೂ ರೈಲುಗಳು ಸ್ವಲ್ಪ ನಿಧಾನವಾಗಿ ಬರುತ್ತಿದ್ದರಿಂದ ದೊಡ್ಡ ಮಟ್ಟದ ಅಪಾಯ ತಪ್ಪಿದೆ ಎಂದು ವರದಿಯಾಗಿದೆ.

ಈ ಬಗ್ಗೆ ತನಿಖೆ ನಡೆಸಿದಾಗ, ಕರ್ನೂಲ್ ನಿಂದ್ ರೈಲು ಕಾಚಿಗುಡ ರೈಲ್ವೇ ನಿಲ್ದಾಣದಲ್ಲಿ ಬಂದು ನಿಂತಿತ್ತು. ಈ ವೇಳೆ ಲಿಂಗಂಪಳ್ಳಿಯಿಂದ ಬಂದ ಎಂಎಂಟಿಎಸ್ ರೈಲು ಚಾಲಕನಿಗೆ ಸರಿಯಾದ ಸಿಗ್ನಲ್ ಸಿಗದ ಪರಿಣಾಮ ನಿಂತಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಒಂದು ರೈಲಿನ ಚಾಲಕ ಸೇರಿ ಸುಮಾರು 6 ಮಂದಿಗೆ ಗಾಯಗಳಾಗಿದೆ. ಇದುವರೆಗೂ ಸಾವನ್ನಪಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಗಾಯಗೊಂಡವರನ್ನು ಕೂಡಲೇ ಹತ್ತಿರದ ಒಸ್ಮಾನಿಯಾ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದರಲ್ಲಿ ಇಬ್ಬರು ಡಿಸ್ಚಾರ್ಜ್ ಕೂಡ ಆಗಿದ್ದಾರೆ.

Leave a Reply