ಏಕಭಾಷೆ ಪರಿಕಲ್ಪನೆ : ಕೇಂದ್ರದ ನಿಲುವಿನ ವಿರುದ್ಧ ಧ್ವನಿ ಎತ್ತಿದ ರಜನಿಕಾಂತ್

ಏಕಭಾಷೆ ಪರಿಕಲ್ಪನೆ ದೇಶದ ಬೆಳವಣಿಗೆಗೆ ಒಳ್ಳೆಯದು. ದುರದೃಷ್ಟಕರ ಸಂಗತಿ ಎಂದರೆ ನಮ್ಮ ದೇಶದಲ್ಲಿ ಇದು ಸಾಧ್ಯವಿಲ್ಲದಿರುವುದು. ಹೀಗಾಗಿ ಯಾವುದೇ ಭಾಷೆಯನ್ನು ಯಾರ ಮೇಲೆಯೂ ಹೇರಲು ಸಾಧ್ಯವಿಲ್ಲ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಅಭಿಪ್ರಾಯ ಪಟ್ಟಿದ್ದಾರೆ.

ಬುಧವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಜನೀಕಾಂತ್, ದೇಶಕ್ಕೊಂದು ಭಾಷೆ ಇದ್ದರೆ ಅದು ದೇಶದ ಪ್ರಗತಿಗೆ ನೆರವಾಗುತ್ತದೆ. ಆದರೆ, ನಮ್ಮ ಭಾರತದಲ್ಲಿ ಒಂದು ಭಾಷೆ ಇಲ್ಲ. ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಹೇರಿಕೆಯನ್ನು ಯಾರೂ ಕೂಡ ಒಪ್ಪುವುದಿಲ್ಲ ಎಂದಿದ್ದಾರೆ.

ಹಿಂದಿ ಹೇರಿಕೆ ವಿಚಾರ ಉತ್ತರ ಭಾರತದ ರಾಜ್ಯಗಳಲ್ಲಿ ಕೆಲಸ ಮಾಡಬಹುದು. ಆದರೆ, ಹಿಂದಿ ಗೊತ್ತಿಲ್ಲದ ದಕ್ಷಿಣ ಭಾರತದಲ್ಲಿ ಇದು ಸಾಧ್ಯವಾಗುವುದಿಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

Leave a Reply