ಒ.ಎನ್.ಜಿ.ಸಿ. ಗ್ಯಾಸ್ ಸಂಸ್ಕರಣ ಘಟಕದಲ್ಲಿ ಭಾರೀ ಬೆಂಕಿ : ಐವರ ಸಾವು

ಒ.ಎನ್.ಜಿ.ಸಿ. ಗ್ಯಾಸ್ ಸಂಸ್ಕರಣ ಘಟಕದಲ್ಲಿ ಭಾರೀ ಬೆಂಕಿ ದುರಂತ ಸಂಭವಿಸಿದ ಘಟನೆ ಮಹಾರಾಷ್ಟ್ರದ ನವೀ ಮುಂಬೈನ ಉರಾಣ್ ನಲ್ಲಿ ನಡೆದಿದೆ. ಅಗ್ನಿ ಅವಘಡದಲ್ಲಿ ಐವರು ಧಾರುಣವಾಗಿ ಸಾವನ್ನಪ್ಪಿದ್ದಾರೆ.

ಬೆಳಿಗ್ಗೆ ಭಾರಿ ಸ್ಫೋಟದಿಂದ ಹೊತ್ತಿಕೊಂಡ ಬೆಂಕಿ ಘಟಕಕ್ಕೆ ವ್ಯಾಪಿಸಿದೆ. ಘಟಕದ ಒಳಗೆ ಹಲವರು ಸಿಲುಕಿರುವ ಶಂಕೆ ಇದೆ. 20 ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಗಿದೆ. ಘಟಕಕ್ಕೆ ಗ್ಯಾಸ್ ಸರಬರಾಜು ಸ್ಥಗಿತಗೊಳಿಸಲಾಗಿದೆ.

ಅಗ್ನಿ ಅವಘಡ ಹಿನ್ನೆಲೆ ಹಜೀರಾ ಪ್ಲಾಂಟ್ ಗೆ ಗ್ಯಾಸ್ ಡೈವರ್ಟ್ ಮಾಡಲಾಗಿದೆ. ಗ್ಯಾಸ್ ಸಂಸ್ಕರಣ ಘಟಕದ ಕಡೆ ತೆರಳುವ ಮಾರ್ಗವನ್ನು ಬಂದ್ ಮಾಡಲಾಗಿದ್ದು. ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಸುರಕ್ಷಿತ ಸ್ಥಳಗಳಿಗೆ ಸುತ್ತಮುತ್ತಲಿನ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ.

Leave a Reply