ಕಣ್ ಕೆಳಗಿನ ಕಪ್ಪಿಗಿದೆ ಕಿಚನ್ ಲ್ಲಿ ಮದ್ದು

ಸ್ಟ್ರೆಸ್ಡ್ ಬದುಕಲ್ಲಿ ರೆಸ್ಟ್ ಗೆ ಜಾಗವೇ ಇಲ್ಲ. ಸದಾ ಎಲ್ಲರೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸ ಮಾಡೋರೆ. ಬದುಕೇ ಒಂದು ರೀತಿಯಲ್ಲಿ ಫುಲ್ ಬ್ಯೂಸಿಯಾಗಿದ್ದಾಗ ಬ್ಯೂಟಿಯಿರಲಿ, ಹೊಟ್ಟೆಯ ಬಗ್ಗೆಯೂ ಯೋಚನೆ ಮಾಡೋಕೆ ಪುರಸೋತ್ತಿಲ್ಲ ಅನ್ನೋರೆ ಎಲ್ಲಾ.

ಈಗ ಹೊಟ್ಟೆಗೂ, ಬ್ಯೂಟಿಗೂ ಯಾಕಪ್ಪಾ ಕನೆಕ್ಟು ಮಾಡ್ತಿರೋದು ಅಂತಾ ನೀವು ಯೋಚಿಸ್ತಿರಬಹುದು. ಹೌದು ಒಂದಕ್ಕೊಂದು ಸಂಬಂಧ ಇದೆ. ಹೊಟ್ಟೆಗೆ ಸಿದ್ಧ ಮಾಡಿಕೊಳ‍್ಳೋ ಜಾಗದಲ್ಲಿ ಬ್ಯೂಟಿ ಸರಿಪಡಿಸಕೊಳ್ಳೋಕೊಂದು ಮದ್ದು ಅಡಿಗಿ ಕುಳಿತಿದೆ. ಅದೇನಪ್ಪ ಅನ್ನೋರಿಗೆ ಈ ಟಿಪ್ಸ್.

ಮೂರು ಹೊತ್ತು ಕಂಪ್ಯೂಟರ್ ಮುಂದೆ ಕೂತು ಕಾಲ ಕಳೆಯೋರೆ ಎಲ್ಲ. ಅದಕೆ ಈಗ್ಯಾರಿಗು ಕಣ್ಣಿಗೆ ಕಾಜಲ್ ಹಾಕಿಕೊಳ್ಳೋ ಅಗತ್ಯಾನೇ ಇಲ್ಲ. ಎಲ್ಲರ ಕಣ್ ಕೆಳಗೂ ರಾಶಿ, ರಾಶಿ ಕಪ್ಪು. ಡಾರ್ಕ್ ಸರ್ಕಲ್ ಪ್ರಾಬ್ಲಂನಿಂದ ಕಣ್ಣು ಕೆಂಪಗೆ ಮಾಡಿಕೊಳ್ಳದಿರೋರು ಯಾರಿದ್ದಾರೆ ನೀವೆ ಹೇಳಿ. ಅದಕ್ಕೆ ಹೀಗೆ ಮಾಡಿದರೆ ಸಾಕು. ಕೆಲವೇ ದಿನಗಳಲ್ಲಿ ಡಾರ್ಕ್ ಸರ್ಕಲ್ ಎಲ್ಲಾ ಮಂಗಮಾಯ.

ಮಾಡಬೇಕಾಗಿದ್ದಿಷ್ಟೆ, ಅಡುಗೆ ಮನೆಯಲ್ಲಿರುವ ಬೇಕಿಂಗ್ ಸೋಡಾ ಒಂದು ಸ್ಪೂನ್ ನಷ್ಟು ತೆಗೆದುಕೊಳ್ಳಿ. ಅದಕ್ಕೆ ಎರಡ್ಮೂರು ಡ್ರಾಪ್ ನೀರು ಹಾಕಿ. ಗಟ್ಟಿಯಾದ ಪೇಸ್ಟ್ ನಂತೆ ಕಲಿಸಿಕೊಳ್ಳಿ. ಅದಾದ ಮೇಲೆ ಕಣ್ಣಿನ ಕೆಳಗೆ ಆ ಪೇಸ್ಟ್ ನ್ನ ಹಚ್ಚಿಕೊಳ್ಳಿ. ಆಮೇಲೆ 5 ರಿಂದ 10 ನಿಮಿಷ ಬಿಟ್ಟು, ಒದ್ದೆಯಾದ ಮೃದು ಬಟ್ಟೆಯಿಂದ ಅಥವಾ ಫೇಸ್ ವೈಪ್ ನಿಂದ ಅದನ್ನ ತೊಳೆದುಕೊಳ್ಳಿ. ಆಗ ಕಣ್ಣ ಕೆಳಗಿನ ತ್ವಚೆ ತುಸು  ಬಿಗಿಯಾದಂತೆ ಅನಿಸುತ್ತೆ.

ಹೀಗೆ ಕೆಲ ವಾರಗಳ ಕಾಲ ರಾತ್ರಿ ಮಲಗುವಾಗ ಮಾಡಿದ್ರೆ ಕಣ್ಣ ಕೆಳಗಿನ ಡಾರ್ಕ್ ಸರ್ಕಲ್ ಕಣ್ಮರೆಯಾಗದಿದ್ದರೆ ನೋಡಿ. ಕಾಸ್ಟ್ಲಿ ಕಾಸ್ಮೆಟಿಕ್ಸ್ ಗಿಂತ ಕಿಚನ್ ಲ್ಲಿನ ಬೇಕಿಂಗ್ ಸೋಡಾ ನಿಮ್ಮ ಕಣ್ಣನ್ನ ಬ್ಯೂಟಿಫುಲ್ ಮಾಡೋದರ್ರಲ್ಲಿ ಡೌಟೇ ಇಲ್ಲ,

Comments are closed.