ಕಾಂಗ್ರೆಸ್ ಗೆ ಗುಡ್ ಬಾಯ್ ಹೇಳಿದ ಊರ್ಮಿಳಾ ಮಾತೋಂಡ್ಕರ್…

ನಟಿ, ರಾಜಕಾರಣಿ  ಊರ್ಮಿಳಾ ಮಾತೋಂಡ್ಕರ್ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದಾರೆ. ಮುಂಬೈ ಕಾಂಗ್ರೆಸ್ ನ ಆಂತರಿಕ ಬಣದ ಕಚ್ಚಾಟಕ್ಕೆ ಬೇಸತ್ತು ಊರ್ಮಿಳಾ ರಾಜೀನಾಮೆ ನೀಡಿದ್ದಾರೆ.

ನನ್ನ ಉದ್ದೇಶ, ಗುರಿಗೆ ಇದು ಹೊಂದುತ್ತಿಲ್ಲ. ನಾನು ಗುರಿ ಮುಟ್ಟಲು ಮುಂಬೈ ಕಾಂಗ್ರೆಸ್ ನ ಆಂತರಿಕ ಕಚ್ಚಾಟ ಬಿಡ್ತಿಲ್ಲವೆಂದು ಊರ್ಮಿಳಾ ಹೇಳಿದ್ದಾರೆ.

ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದೇನೆ ಎಂದು ಊರ್ಮಿಳಾ ಹೇಳಿದ್ದಾರೆ. ರಾಜೀನಾಮೆ ಬಗ್ಗೆ ಆಲೋಚನೆ ಬಂದ ನಂತ್ರ ನಾನು ಸಾಕಷ್ಟು ಪ್ರಯತ್ನಪಟ್ಟಿದ್ದೇನೆ. ಮೇ. 16 ರಂದು ನಾನು ಮುಂಬೈ ಕಾಂಗ್ರೆಸ್ ಮುಖ್ಯಸ್ಥ ಮಿಲಿಂದ್ ದಿಯೋರಾಗೆ ಪತ್ರ ಬರೆದಿದ್ದೆ. ಆದ್ರೆ ಅದಕ್ಕೆ ಯಾವುದೇ ಕ್ರಮಕೈಗೊಂಡಿರಲಿಲ್ಲವೆಂದು ಊರ್ಮಿಳಾ ಹೇಳಿದ್ದಾರೆ. ಗೌಪ್ಯವಾಗಿದ್ದ ನನ್ನ ಪತ್ರವನ್ನು ನಂತ್ರ ಬಹಿರಂಗಪಡಿಸಿದ್ದರು. ಇದು ನನಗೆ ಮಾಡಿದ ದ್ರೋಹವೆಂದು ಊರ್ಮಿಳಾ ಹೇಳಿದ್ದಾರೆ.

ಪದೇ ಪದೇ ಪ್ರತಿಭಟನೆ ನಡೆಸುತ್ತಿದ್ದರೂ ಪಕ್ಷದ ಯಾವುದೇ ವ್ಯಕ್ತಿ ಕ್ಷಮೆಯಾಚಿಸಲಿಲ್ಲ. ಉತ್ತರ ಕಾಂಗ್ರೆಸ್ ನ ಕಳಪೆ ಪ್ರದರ್ಶನಕ್ಕೆ ಕಾರಣರು ಯಾರು ಎಂಬುದನ್ನು ನಾನು ಪತ್ರದಲ್ಲಿ ಹೇಳಿದ್ದೆ. ಅವ್ರ ವಿರುದ್ಧ ಕ್ರಮಕೈಗೊಳ್ಳುವ ಬದಲು ಅವ್ರಿಗೆ ಕೂಡ ಹುದ್ದೆ ನೀಡಲಾಗಿದೆ ಎಂದು ಊರ್ಮಿಳಾ ಹೇಳಿದ್ದಾರೆ.

Leave a Reply

Your email address will not be published.