Hit & Run case : ಆರೋಪಿಗೆ ಕಾರು ಒಡಿಸಲು ಬರುವುದಿಲ್ಲ! ಹಾರಿಸ್ ಮಗ ಸಿಕ್ಕಿಬಿದ್ದ ಕಥೆ..

ಅಪಘಾತ ಕೃತ್ಯ ಒಪ್ಪಿಕೊಂಡಿದ್ದ ನಲಪಾಡ್‌ ಬಾಡಿಗಾರ್ಡ್‌ ಬಾಲಕೃಷ್ಣನಿಗೆ ಕಾರು ಸ್ಟಾರ್ಟ್‌ ಮಾಡಲು ಸಹ ಬರುವುದಿಲ್ಲ ಎಂದು ಪೊಲೀಸರು ಕೋರ್ಟ್‌‌ಗೆ ಹಾಜರುಪಡಿಸಿದ್ದಾರೆ.

ಮೇಖ್ರಿ ವೃತ್ತದ ಬಳಿ ಭಾನುವಾರ ನಡೆದ ಸರಣಿ ಅಫಘಾತಕ್ಕೆ ಶಾಸಕ N.A.ಹಾರಿಸ್ ಮಗ ಮೊಹಮದ್ ನಲಪಾಡ್ ಕಾರಣ ಎಂದು ಪೋಲಿಸರು ಆರೋಪಿಸಿ ವಿಚಾರಣೆಗೆ ಹಾಜರಾಗುವಂತೆ ನಲಪಾಡ್‌ಗೆ ನೋಟೀಸು ನೀಡಿದ್ದಾರೆ.

ಅಫಘಾತ ಸಂಭಂಧವಾಗಿ ಸೋಮವಾರ ತಾನೇ ವಾಹನವನ್ನು ಚಲಾಯಿಸಿದ್ದಾಗಿ ಹೇಳಿ ಠಾಣೆಗೆ ಬಂದು ಶರಣಾಗಿದ್ದ ಬಾಲಕೃಷ್ಣ ಎಂಬವರನ್ನು ಪೋಲೀಸರು ತನಿಖೆಗೆ ಒಳಪಡಿಸಿದ್ದಾರೆ. ನಂತರ ಅವರು ಚಾಲಕ ಅಲ್ಲ ಬದಲಾಗಿ ಬಾಡಿಗಾರ್ಡ್ ಎಂದು ತಿಳಿದು ಬಂದಿದೆ. ಇಂದು ಬಾಲಕೃಷ್ಣ ಮೇಲೆ ಸುಳ್ಳು ಹೇಳಿಕೆ ನೀಡಿದ ಆರೋಪದಲ್ಲಿ ಮತ್ತೊಂದು ಕೇಸು ದಾಖಲಿಸಿ ಕೋರ್ಟ್‌‌ಗೆ ಹಾಜರುಪಡಿಸಲಾಗಿದೆ.

ಇಂದು ಬಾಲಕೃಷ್ಣರನ್ನು ತೀವ್ರ ವಿಚಾರಣೆ ನಡೆಸಿದ ಪೊಲೀಸರು ಬೆಂಟ್ಲಿ ಕಾರನ್ನು ಚಲಾಯಿಸುವಂತೆ ಸೂಚಿಸಿದ್ದಾರೆ. ಆದರೆ ಅಚ್ಚರಿಯ ರೀತಿಯಲ್ಲಿ ಆತನಿಗೆ ಕಾರನ್ನು ಸ್ಟಾರ್ಟ್‌ ಮಾಡಲು ಆಗಿಲ್ಲ. ಕಾರು ಸ್ಟಾರ್ಟ್‌ ಮಾಡಲು ಬರದೇ ಅಪಘಾತ ಹೇಗೆ ಮಾಡಿದೆ ಎಂದು ಪ್ರಶ್ನಿಸಿದಾಗ ಆತ ಅಪಘಾತ ಸಂದರ್ಭದಲ್ಲಿ ನಾನು ಕಾರು ಚಾಲನೆ ಮಾಡುತ್ತಿರಲ್ಲಿಲ್ಲ, ಬದಲಿಗೆ ನಲಪಾಡ್‌ ಚಾಲನೆ ಮಾಡುತ್ತಿದ್ದರು ಎಂದು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಗಾಗಿ ತನ್ನ ಕೃತ್ಯ ಮುಚ್ಚಿಡುವುದಕ್ಕಾಗಿ ನಲಪಾಡ್ ಬೇರೆಯವರನ್ನು ಕಳಿಸಿದ್ದಾರೆ ಎಂದು ಪೊಲೀಸರು ನಲಪಾಡ್ ಖುದ್ದು ವಿಚಾರನೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

“ಅಫಘಾತದ ಸಂಭಂಧ ಈಗಾಗಲೇ ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಾಗಿತ್ತು ಆದರೆ ಇದರಲ್ಲಿ ನಲಪಾಡ್ ಪಾತ್ರವಿರುವುದಕ್ಕೆ ಪುರಾವೆ ಸಿಕ್ಕಿರುವುದರಿಂದ ಅವರಿಗೆ ನೋಟಿಸ್ ನೀಡಲಾಗಿದೆ ಮತ್ತು ಇದರ ಮುಂದಿನ ತನಿಖೆಯನ್ನು ಠಾಣೆಯ ಇನ್ಸ್ಪೆಕ್ಟರ್ ನಡೆಸುತ್ತಾರೆ” ಎಂದು ಸಂಚಾರ ವಿಭಾಗದ ಜಂಟಿ ಪೋಲಿಸ್ ಕಮೀಷನರ್ B.R.ರವಿಕಾಂತೇ ಗೌಡ ಹೇಳೀದ್ದಾರೆ.