ಕಾರ್ ಮೇಲೆ ಕಲ್ಲು ಎತ್ತು ಹಾಕಿ ಮತ್ತೆ ಮಂಡ್ಯದಲ್ಲಿ ಪುಂಡಾಟ ಮೆರೆದ ಹುಚ್ಚ ವೆಂಕಟ್…

ಕನ್ನಡ ಚಿತ್ರನಟ ನಿರ್ಮಾಪಕನಾಗಿದ್ದ ಸೈಕೋ ವೆಂಕಟ್ ಮತ್ತೆ ಮಂಡ್ಯದಲ್ಲಿ ಪುಂಡಾಟ ಮುಂದುವರೆಸಿದ್ದಾನೆ.

ಮಂಡ್ಯದ ಜ್ಯೋತಿ ಇಂಟರ್ ನ್ಯಾಷಿನಲ್ ಹೋಟೇಲ್ ಮುಂಭಾಗದಲ್ಲಿ ನಿಂತದ ಕಾರ್ ಮೇಲೆ ಕಲ್ಲು ಎತ್ತು ಹಾಕಿ ಹುಚ್ಚ ವೆಂಕಟ್ ಪುಂಡಾಟ ಮೆರೆದಿದ್ದಾನೆ.

ಇತ್ತೀಚೆಗೆ ಚೆನ್ನೈ ನಲ್ಲಿ ಹುಚ್ಚನಂತೆ ಅಲೆದಾಡ್ತ ಕಾಣಿಸಿಕೊಂಡಿದ್ದ ಹುಚ್ಚ ವೆಂಕಟ್,  ಅಲ್ಲಿಂದ ಪಾಂಡವಪುರ, ಕೊಡುಗು,ಮೈಸೂರಿನಲ್ಲಿ ಹುಚ್ಚಾಟವಾಡಿದ್ದಾನೆ. ಕೊಡಗಿನಿಂದ ರಾತ್ರಿ ಕಂಠಪೂರ್ತಿ ಕುಡಿದು ಜ್ಯೋತಿ ಇಂಟರ್ ನ್ಯಾಷಿನಲ್ ಹೋಟೇಲ್ ನಲ್ಲೆ ಉಳಿದಿದ್ದ ಹುಚ್ಚ ವೆಂಕಟ್, ಇಂದು ಹೋಟೇಲ್ ಮುಂಭಾಗ ಮತ್ತೆ ಪುಂಡಾಟ ಮಾಡಿ ಕಾರಿನ ಗಾಜು ಒಡೆದು ಪುಂಡಾಟ ಮೆರೆದಿದ್ದಾನೆ.

ಹುಚ್ಚ ವೆಂಕಟ್ ಪುಂಡಾಟ ಕಂಡು ಸ್ಥಳೀಯ ಸಾರ್ವಜನಿಕರು ಗೂಸಾ ಕೊಟ್ಟಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರಿಂದ ಹುಚ್ಚ ವೆಂಕಟ್ ರಕ್ಷಣೆ ಮಾಡಿ ಬಳಿಕ ಕಾರಿನಲ್ಲಿ ಬೆಂಗಳೂರಿಗೆ ಕಳುಹಿಸಿ ಕೊಟ್ಟಿದ್ದಾರೆ.

Leave a Reply