ಕುಡಿಯುವುದಕ್ಕೆ ಹಣ ನೀಡಲಿಲ್ಲ ಎಂದು ಪಾಪಿ ಮಗ ಮಾಡಿದ್ದೇನು ಗೊತ್ತಾ..?

ಇನ್ನೆಂಥಂಥಾ ಮಕ್ಕಳನ್ನ ನಾವು ಸಮಾಜದಲ್ಲಿ ನೋಡಬೇಕೋ ಏನೋ..? ಈ ಸ್ಟೋರಿ ಓದಿದ್ರೆ ನೀವು ಪಾಪಿ ಮಗನಿಗೆ ಅದ್ಯಾವ ಶಿಕ್ಷೆಯಾಗಬೇಕು ಅಂತ ಬಯಸಿತ್ತಿರೋ ಏನೋ..?

ಇಲ್ಲೊಬ್ಬ ರಾಕ್ಷಸ ಮಗ ಕುಡಿಯಲು ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ತಾಯಿಯನ್ನು ಕೊಲೆ ಮಾಡಿ ಆಕೆಯ ಮೆದುಳನ್ನ ಫ್ರೈ ಮಾಡಿದ  ಘಟನೆ ಛತ್ತೀಸ್‍ಗಢದ ಖಾರ್ಸಿ ಜಿಲ್ಲೆಯಲ್ಲಿ ನಡೆದಿದೆ.

ಸೀತಾರಾಮ್ ಒರಾನ್ ತಾಯಿಯನ್ನು ಕೊಂದ ಮಗ. ಸೀತಾರಾಮ್ ತನ್ನ ತಾಯಿ ಫುಲೋಬಾಯಿ ಜೊತೆ ವಾಸಿಸುತ್ತಿದ್ದನು. ಅಲ್ಲದೆ ಕುಡಿತದ ಚಟಕ್ಕೆ ಬಲಿಯಾಗಿದ್ದನು. ಸೀತಾರಾಮ್ ಮದ್ಯ ಸೇವಿಸಲು ತನ್ನ ತಾಯಿಯ ಬಳಿ ಹಣ ಕೇಳಿದ್ದನು. ಆದರೆ ತಾಯಿ ಹಣ ಕೊಡಲು ನಿರಾಕರಿಸಿದ್ದರು.

ತಾಯಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಸೀತಾರಾಮ್ ಹರಿತವಾದ ವಸ್ತುವಿನಿಂದ ತನ್ನ ತಾಯಿಗೆ ಹೊಡೆದಿದ್ದಾನೆ. ನಂತರ ಆಕೆಯ ತಲೆ ಬುರುಡೆಯನ್ನು ತೆರೆದು ಮೆದುಳನ್ನು ಫ್ರೈ ಮಾಡಲು ಹಾಕಿದ್ದಾನೆ. ಆದರೆ ಸೀತಾರಾಮ್ ಆ ಮೆದುಳನ್ನು ತಿನ್ನುವ ಮೊದಲು ಅವರ ಕಿರಿಯ ಸಹೋದರನ ಪತ್ನಿ ಸ್ಥಳಕ್ಕೆ ಬಂದಿದ್ದಾರೆ. ಸಹೋದರನ ಪತ್ನಿಯನ್ನು ನೋಡುತ್ತಿದ್ದಂತೆ ಸೀತಾರಾಮ್ ಸ್ಥಳದಿಂದ ಪರಾರಿ ಆಗಿದ್ದಾನೆ.

Leave a Reply

Your email address will not be published.