‘ಕುಣಿಯಲಾರದ ಸೂ… ನೆಲ ಡೊಂಕು ಅಂದಳಂತೆ’ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ

‘ಕುಣಿಯಲಾರದ ಸೂ… ನೆಲ ಡೊಂಕು ಅಂದಳಂತೆ’ ಈ ಮಾತು ಹೇಳಿದ್ದು ಮಾಜಿ ಸಿಎಂ ಸಿದ್ದರಾಮಯ್ಯ.

ಮೈತ್ರಿ ಸರ್ಕಾರ ಬಿದ್ದಿದ್ದಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಪ್ರಶ್ನೆಗೆ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೈತ್ರಿ ಸರ್ಕಾರ ನಡೆಸುತ್ತಿದ್ದ ಜೆಡಿಎಸ್ ಪಕ್ಷಕ್ಕೆ ಸಿದ್ದರಾಮಯ್ಯ ಟಾಂಗ್‌ ಕೊಟ್ಟಿದ್ದಾರೆ.

ಆಪ್ತರು ಸರ್ಕಾರ ಬಿಳೋದಕ್ಕೆ ನೀವೆ ಕಾರಣವಂತಲ್ಲ ಸರ್ ಎಂದು ಪ್ರಶ್ನಿಸಿದ್ದಕ್ಕೆ , ಮೈಸೂರಿನ ಪಿರಿಯಾಪಟ್ಟಣದಲ್ಲಿ ಆಪ್ತರೋಬ್ಬರ ಮನೆಯಲ್ಲಿ  ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ,  ಇದಕ್ಕೆ ಉತ್ತರಿಸುವಾಗ ಅವಾಚ್ಯ ಶಬ್ದ ಬಳಸಿ ಉತ್ತರಿಸಿದ್ದಾರೆ.

ಇದರಿಂದ ವಿವಾದ ಹುಟ್ಟುಹಾಕಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ.

Leave a Reply