ಕೂಲಿಯೂ ಇಲ್ಲ, ಅನ್ನವೂ ಇಲ್ಲ, ಹೆಚ್ಚಾಗಿರೋದೊಂದೇ ಸಾಲಗಾರರ ಕಾಟ….

ಮಲೆನಾಡಿನ ಮಹಾ ಮಳೆ ಮಲೆನಾಡಿಗರು ಮನೆ-ಮಠ, ಆಸ್ತಿ-ಪಾಸ್ತಿ, ಬದುಕು ಎಲ್ಲವನ್ನೂ ತಿಂದಿದೆ. ಇರೋಕೆ ಮನೆ ಇಲ್ಲ. ದುಡಿಯೋ ಹೊಲಗದ್ದೆ, ತೋಟಗಳಿಲ್ಲ.

ಮಳೆ ನಿಲ್ತೆಂದು ನಿರಾಶ್ರಿತ ಕೇಂದ್ರದಲ್ಲಿದ್ದೋರನ್ನ ಸರ್ಕಾರವೇ ಸ್ವಗ್ರಾಮಗಳಿಗೆ ಹಿಂದಿರುಗಿಸಿದೆ. ಆದ್ರೆ, ಬರೀಗೈಲಿ ಗ್ರಾಮಗಳಿಗೆ ಹಿಂದಿರೋರ್ಗೆ ಆಕಾಶವೇ ಕಳಚಿ ಬಿದ್ದಂತಾಗಿದೆ. ಸ್ವಗ್ರಾಮಗಳಿಗೆ ಬಂದೋರ್ಗೆ ಇದು ನಮ್ಮೂರ ಎಂಬಂತಾಗಿದೆ. ಮಣ್ಣು ಪಾಲಾದ ಮನೆಗಳ ಪಳಯುಳಿಕೆಯನ್ನ ಆರಿಸುವಂತಹಾ ಸ್ಥಿತಿ ನಿರ್ಮಾಣವಾಗಿದ್ದು, ಜನ ಬದುಕಿಗಾಗಿ ಹೋರಾಡ್ತಿದ್ದಾರೆ. ಹೊಲಗದ್ದೆಗಳು ನದಿ ದಡಗಳಾಗಿವೆ. ತೋಟಗಳಲ್ಲಿ ಭೂಕಂಪದ ಅನುಭವ. ಕಾರ್ಮಿಕರು ಕೂಲಿಗೆ ಹೋಗೋಕೆ ಸಿದ್ಧರಿದ್ದಾರೆ.

ಆದ್ರೆ, ಕರೆಯೋಕೆ ಮಾಲೀಕರು ತಯಾರಿಲ್ಲ. ಯಾಕಂದ್ರೆ, ತೋಟಗಳ ಸ್ಥಿತಿ ಹಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಶ್ರಮಿಕ ವರ್ಗವೇ ಹೆಚ್ಚಿದೆ. ಕೂಲಿಯೇ ಅವ್ರ ಜೀವಾಳ. ಆದ್ರೀಗ, ಕೂಲಿ ಸಿಗದಂತಾಗಿರೋದು ಮಲೆನಾಡಿಗರಿಗೆ ಬದುಕಿನ ಬಗ್ಗೆ ಅಂಧತ್ವ ಕವಿದಂತಾಗಿದ್ದು, ಮುಂದಿನ ದಾರಿ ಕಾಣದಂತಾಗಿದೆ.

Leave a Reply