ಗ್ರಾಮ ಪಂಚಾಯಿತಿ ಅಧಿಕಾರಿಗಳ ಯಡವಟ್ಟಿನಿಂದಾದ ಕುಡಿಯೋ ನೀರಿನಲ್ಲಿ ಏನಿತ್ತು ಗೊತ್ತಾ..?

ರಾಜ್ಯದೆಲ್ಲೆಡೆ ಬಹುತೇಕ ಮಳೆ – ಪ್ರವಾಹದಿಂದ ಸಾಂಕ್ರಾಮಿ ಖಾಯಿಲೆಗಳು ತ್ವರಿತವಾಗಿ ಹರಡುತ್ತಿವೆ. ಆದರೆ  ಖಾಯಿಲೆ ಹರಡುವ ಸಂದೇಶ ಮೊದಲೇ ತಿಳಿದ ಗ್ರಾಮಸ್ಥರು ಸದ್ಯ ಜಾಗರೂಕರಾಗಿದ್ದಾರೆ.

ಹೌದು.. ವಿಜಯಪುರ ಜಿಲ್ಲೆಯ ಕುಮಟಗಿ ಗ್ರಾಮದಲ್ಲಿ  ಕುಡಿಯುವ ನೀರಿನಲ್ಲಿ ಹುಳುಗಳು ಪತ್ತೆಯಾಗಿದ್ದು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯಿತಿಯಿಂದ ನಳಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗಿತ್ತು. ಈ ಕುಡಿಯುವ ನೀರಿನಲ್ಲಿ ಹುಳುಗಳು ಪತ್ತೆಯಾಗಿ ಸದ್ಯ ಗ್ಯಾಮಸ್ಥರು ಕಂಗಾಲಾಗಿದ್ದಾರೆ.

ಕುಮಟಗಿ ಕೆರೆಯ ಕಲುಷಿತ ನೀರನ್ನೆ ಕುಡಿಯಲು ಪೂರೈಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೆರೆ ನೀರು ಕಲುಷಿತಗೊಂಡು, ಹುಳುಗಳಿಂದ ತುಂಬಿ ಹೋಗಿದ್ದರೂ ಇದೇ ನೀರನ್ನ ಸರಭರಾಜು ಮಾಡಿದ್ದಾರೆಂದು ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿ ಇದರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

 

Leave a Reply