ಜೀವನದಲ್ಲಿ ಜಿಗುಪ್ಸೆ ಗೊಂಡು ಯುವಕನೋರ್ವ ನೇಣಿಗೆ ಶರಣು….!

ನನಗೆ ಎಲ್ಲರೂ ಮೋಸ ಮಾಡುತ್ತಿದ್ದಾರೆಂದು ಜೀವನದಲ್ಲಿ ಜಿಗುಪ್ಸೆ ಗೊಂಡು ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ತಾಲ್ಲೂಕಿನ ಮೊತ್ತಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೊತ್ತಹಳ್ಳಿ ಗ್ರಾಮದ ಸುಮಂತ್ (26) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು, ತಂದೆಗೆ ಆತ್ಮಹತ್ಯೆಗೂ ಮೊದಲು ಪತ್ರ ಬರೆದು ಕ್ಷಮೆಯನ್ನು ಕೋರಿದ್ದಾನೆ. ಜೊತೆಗೆ ಸಹೋದರ ನಿಮ್ಮನ್ನು ಚನ್ನಾಗಿ ನೋಡಿಕೊಳ್ಳುತ್ತಾನೆ ಎಂಬ ವಿಶ್ವಾಸವಿದೆ ಎಂದು ಪತ್ರದಲ್ಲಿ ಬರೆದಿದ್ದಾನೆ. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

 

 

 

Leave a Reply