ಬೇರೆ ಭಾಷಗಳಿಗೆ ಹೋಲಿಸಿದರೆ ಕನ್ನಡ ಮಾತನಾಡುವುದು ಕಷ್ಟ ಎಂದು ಹೇಳಿದ್ದ ಸ್ಯಾಂಡಲ್ ವುಡ್ ನಟಿ ರಶ್ನಿಕಾ ಮಂದಣ್ಣ ಭಾರೀ ಕನ್ನಡ ಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದರು. ಸದ್ಯ ಟಾಲಿವುಡ್ ನಲ್ಲೂ ಕಿರಿಕ್ ಮಾಡಿಕೊಂಡಿದ್ದಾರೆ.

ಅದ್ಯಾಕೆ ಅಂತೀರಾ..? ಟಾಲಿವುಡ್ ಸೂಪರ್ಸ್ಟಾರ್ ನಾಗಚೈತನ್ಯ ಸಿನಿಮಾವನ್ನು ತಿರಸ್ಕರಿಸುವ ಮೂಲಕ ರಶ್ಮಿಕಾ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇದೇ ಕಾರಣಕ್ಕೆ ಕೆಲ ಚಿತ್ರಗಳಿಂದ ಅವರನ್ನು ಕೈಬಿಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ನಾಗಚೈತನ್ಯರೊಂದಿಗಿನ ಮುಂದಿನ ಸಿನಿಮಾಕ್ಕೆ ಹೆಚ್ಚಿನ ಸಂಭಾವನೆ ಬೇಡಿಕೆ ಇಟ್ಟಿದ್ದರು. ಇದು ಪ್ರಖ್ಯಾತ ನಿರ್ಮಾಪಕ ದಿಲ್ ರಾಜು ಅಸಮಾಧಾನಕ್ಕೆ ಕಾರಣವಾಗಿದೆ. ರಶ್ಮಿಕಾ ಕೇಳಿದಷ್ಟು ಹಣವನ್ನು ದಿಲ್ ರಾಜು ಅವರು ನೀಡದಿದ್ದಕ್ಕೆ ಚಿತ್ರವನ್ನೇ ಮಾಡಲ್ಲ ಎಂದಿದ್ದಾರೆ ರಶ್ಮಿಕಾ.