ಟಿಬಿ ಡ್ಯಾಂನಲ್ಲಿ ಹೂಳು : ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ಗಂಗಾವತಿ ರೈತ…

ತುಂಗಭದ್ರಾ ಡ್ಯಾಂನಲ್ಲಿ ಸಂಗ್ರಹವಾಗಿರುವ ಹೂಳಿನ ಸಮಸ್ಯೆಯಿಂದಾಗಿ ಪ್ರಧಾನಿಗೆ ಗಂಗಾವತಿಯ ರೈತನೊಬ್ಬ ರಕ್ತದಲ್ಲಿ ಪತ್ರ ಬರೆದಿದ್ದಾನೆ.

ಪರ್ಯಾಯ ಡ್ಯಾಂ ನಿರ್ಮಿಸಲು ಅಗತ್ಯ ಹಣಕಾಸು ನೆರವು ನೀಡುವಂತೆ ಪ್ರಧಾನಿಗೆ ಮನವಿ ಮಾಡಿದ್ದಾನೆ. ನರೇಂದ್ರ ಮೋದಿಗೆ ಪತ್ರ ಬರೆದ ಕಾರಟಗಿ ತಾಲೂಕಿನ ಸಿದ್ದಾಪೂರ ಗ್ರಾಮದ ಮಲ್ಲಿಕಾರ್ಜುನಗೌಡ, ಸೆ.17ರಂದು ರಕ್ತದಲ್ಲಿ ಐದು ಪುಟದ ಪತ್ರ ಬರೆದು ಮನವಿ ಮಾಡಿದ್ದಾರೆ. ಕೃಷ್ಣ ಮತ್ತು ತುಂಗಭದ್ರಾ ಮಧ್ಯದ ಪ್ರದೇಶ ದೋಅಬ್ ಪ್ರದೇಶವಾಗಿದ್ದು ಫಲವತ್ತಾದ ಭೂಮಿ ಇದ್ದರೂ ಸಮರ್ಪಕ ನೀರು ಬಳಕೆ ಮಾಡಲು ಡ್ಯಾಂ ಹಾಗೂ ಕಾಲುವೆಗಳ ನಿರ್ಮಾಣ ಆಗದಿರುವ ಬಗ್ಗೆ  ಪ್ರಸ್ತಾಪ ಮಾಡಿದ್ದಾರೆ.

ಸಿದ್ದಾಪೂರ ಗ್ರಾಮದಲ್ಲಿ ಮೋದಿಯವರ 69ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿರುವ ಮಲ್ಲಿಕಾರ್ಜುನಗೌಡ, ಪ್ರವಾಹ ಸಂದರ್ಭದಲ್ಲಿ ಹರಿದು ಹೋಗುವ ನೀರನ್ನು ಸಂಗ್ರಹಿಸಿ ರೈತರ ಗದ್ದೆಗೆ ಹರಿಸಲು ನವಲಿ ಗ್ರಾಮದ ಹತ್ತಿರ ನಿಯೋಜಿತ ಪರ್ಯಾಯ ಡ್ಯಾಂ ನಿರ್ಮಿಸಲು ಮನವಿ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ನದಿಗಳ ನೀರನ್ನು ಸಮರ್ಪಕವಾಗಿ ಬಳಸಲು ತುಂಗಭದ್ರಾ ಹಾಗೂ ಕೃಷ್ಣಾನದಿಗೆ ಕಟ್ಟಲಾದ ಡ್ಯಾಂಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಿ ಅಗತ್ಯ ಹಣಕಾಸು ನೆರವು ನೀಡಬೇಕೆಂದು 100 ಮಿ . ಲೀ . ರಕ್ತ ಬಳಸಿ ಪತ್ರ ಬರೆದಿದ್ದಾರೆ.

 

 

Leave a Reply