ಗೆಲುವಿಗೆ ಕೇವಲ ಎರಡು ವಿಕೆಟ್ ಬೇಕಾಗಿದ್ದ ಭಾರತವು ಇಂದು ಬೆಳಗ್ಗೆ ಆಟ ಆರಂಭವಾದ ವೇಳೆ ಗೆಲುವು ದಾಖಲಿಸಿಕೊಂಡು ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಟೆಸ್ಟ್ ಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ.

ಶಾಹಬಾಜ್ ನದೀಂ ಎರಡು ವಿಕೆಟ್ ಉರುಳಿಸಿ ವಿರಾಟ್ ಕೊಹ್ಲಿ ಪಡೆಯ ಗೆಲುವಿನ ವಿಧಿವಿಧಾನಗಳನ್ನು ಪೂರೈಸಿದರು. ಕೊಹ್ಲಿ ಪಡೆ 202 ರನ್ ಗಳಿಂದ ಗೆಲುವು ಪಡೆದು 3-0ರಿಂದ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.

ನದೀಂ  ವಿಕೆಟ್ ಕಬಳಿಸಿದ ಬಳಿಕ ದಕ್ಷಿಣ ಆಫ್ರಿಕಾದ ವಿರುದ್ದ ಟೀಂ ಇಂಡಿಯಾ ಗೆಲುವಿನ ಕೇಕೆ ಹಾಕಿತು.

ಭಾರತ ಮೊದಲ ಇನ್ನಿಂಗ್ಸ್ : 9 ವಿಕೆಟ್ ಗೆ 497 ಡಿಕ್ಲೇರ್
ದ. ಆಪ್ರಿಕಾ ಮೊದಲ ಇನ್ನಿಂಗ್ಸ್: 162
ದ. ಆಪ್ರಿಕಾ ದ್ವಿತೀಯ ಇನ್ನಿಂಗ್ಸ್: 133