ಡಿವೈಎಸ್ ಪಿ ಗಣಪತಿ ಮೇಲಿದ್ದ ಆರೋಪಗಳೇನು..?

dysp ganapathi

ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ವಿಚಾರ ಹೊರ ಬೀಳುತ್ತಿದ್ದಂತೆ ಇದಕ್ಕೆಲ್ಲ ಕಾರಣ ಏನು..? ಮತ್ತು ಯಾರು..? ಎಂಬ ಪ್ರಶ್ನೆಗಳು ಎಲ್ಲರ ತಲೆಯಲ್ಲಿ ಓಡಾಡುತ್ತಿದೆ. ಇದರ ಜೊತೆ ಜೊತೆಗೆ ಗಣಪತಿಯವರ ಮೇಲಿನ ಆರೋಪ ಪಟ್ಟಿಗಳು ಕೂಡ ಹೊರ ಬಿದ್ದಿದೆ. ಸದ್ಯದ ಮಟ್ಟಿಗೆ ಡಿವೈ ಎಸ್ ಪಿ ವಿರುದ್ಧ ಕೇಳಿ ಬರುತ್ತಿರುವ ಆರೋಪ ಪಟ್ಟಿ ಇಲ್ಲಿದೆ.

ಶ್ರೀ ಎಂ.ಕೆ.ಗಣಪತಿ, ಡಿವೈಎಸ್‍ಪಿ ರವರ ವಿರುದ್ದದ ಆರೋಪಗಳ ಸಂಕ್ಷಿಪ್ತ ವಿವರ.

1)     ದಿನಾಂಕ : 2/3/2012 ರಂದು ವಕೀಲರು ಪೊಲೀಸರು ಮತ್ತು ಮಾಧ್ಯಮದವರುಗಳ ನಡುವೆ ಸಿಟಿ ಸಿವಿಲ್ ಕೋರ್ಟ್ ಸಂಕೀರ್ಣದಲ್ಲಿ ನಡೆದ ಘರ್ಷಣೆಗಳನ್ನು ಕುರಿತು ಒಟ್ಟು 191 ಪ್ರಕರಣಗಳು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಅವುಗಳಲ್ಲಿ  2 ಪ್ರಕರಣಗಳನ್ನು ಅಂದರೆ ಹಲಸೂರುಗೇಟ್ ಠಾಣಾ ಮೊ.ಸಂ. 206/2012 ಮತ್ತು 222/2012 ನ್ನು ಪ್ರತ್ಯೇಕಿಸಿ,  ಆರ್.ಸಿ.9&10(ಎಸ್)2013/ಎಸ್‍ಸಿಬಿ/ಚೆನೈ ರಡಿ ದಾಖಲಿಸಿರುವ  ಪ್ರಕರಣದಲ್ಲಿ ಶ್ರೀ ಎಂ.ಕೆ.ಗಣಪತಿ ರವರ ವಿರುದ್ದ ಚಾರ್ಜ್‍ಶೀಟ್ ಸಲ್ಲಿಸಲಾಗಿರುತ್ತದೆ.
ಷರಾ: ಪ್ರಸ್ತುತ ಮಾನ್ಯ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿರುತ್ತದೆ.

2)    ಮಡಿವಾಳ ಪೊಲೀಸ್ ಠಾಣೆಯ 2014ನೇ ಸಾಲಿನ ಪರಿವೀಕ್ಷಣಾ ಸಮಯದಲ್ಲಿ ಮಡಿವಾಳ ಪೊಲೀಸ್ ಠಾಣೆಯಲ್ಲಿ ನಿರ್ವಹಣೆ ಮಾಡಿರುವ ಮುದ್ದೆಮಾಲ್ ರಿಜಿಸ್ಟರ್‍ನಲ್ಲಿರುವ ವಸ್ತುಗಳಿಗೂ ಅಮಾನತ್ತುಪಡಿಸಿಕೊಂಡಿರುವ ಹಲವಾರು ವಸ್ತುಗಳಿಗೂ ಭಾರಿ ವ್ಯತ್ಯಾಸ ಕಂಡು ಬಂದಿರುತ್ತದೆ ಹಾಗೂ ಅಮಾನತ್ತುಪಡಿಸಿಕೊಂಡ ಮುದ್ದೆಮಾಲ್‍ಗಳ ವಿವರಗಳನ್ನು ರಿಜಿಸ್ಟರ್‍ನಲ್ಲಿ ಬರೆಯದೆ ಅನೇಕ ಮುದ್ದೆಮಾಲ್‍ಗಳನ್ನು ಕೈಬಿಟ್ಟಿರುವ ಆರೋಪವಿರುತ್ತದೆ.

ಷರಾ : ಆದರೆ ಈ ಪ್ರಕರಣಕ್ಕೆ ಸಂಬಂದಿಸಿದಂತೆ, ಪೂರ್ಣ ವಿವರಗಳನ್ನು ಕಳುಹಿಸುವಂತೆ ಕೋರಿ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರಿಗೆ ದಿನಾಂಕ:  ದಿ: 24/06/2016 ರಂದು ಡಿಜಿ ಮತ್ತು ಐಜಿಪಿ ರವರಿಂದ ಅರೆ ಸರ್ಕಾರಿ ಪತ್ರ ಬರೆಯಲಾಗಿದೆ.

1.     ಶ್ರೀ ರಂಗಸ್ವಾಮಿ ರವರು ನೀಡಿದ ದೂರಿನ ಮೇಲೆ ದಿನಾಂಕ: 22.10.2013 ರಂದು ದಾಖಲಾದ ಮೊಕದ್ದಮೆ ಸಂಖ್ಯೆ 521/2013 ಕಲಂ 457-380 ಐಪಿಸಿ ಪ್ರಕರಣದಲ್ಲಿ ಕಳುವಾಗಿರುವ ಹಣ 1 ಕೋಟಿ 56 ಲಕ್ಷ ಎಂದು ತಿಳಿದಿದ್ದರೂ ಸಹ, ಘೋರ ಅಪರಾಧ ಪ್ರಕರಣ ದಾಖಲಿಸಿಕೊಳ್ಳದೆ ಸಾಮಾನ್ಯ ಪ್ರಕರಣ ದಾಖಲಾಗುವಂತೆ ನೋಡಿಕೊಂಡಿರುತ್ತೀರಿ ಮತ್ತು ಹಿರಿಯ ಅಧಿಕಾರಿಗಳ ಗಮನಕ್ಕೆ ನಿಜ ಸಂಗತಿಯನ್ನು ತಿಳಿಸದೆ ಮರೆಮಾಚಿರುತ್ತೀರಿ.

2.     ಪ್ರಕರಣ ದಾಖಲಾದ 2 ದಿನಗಳ ತರುವಾಯ ನಾಗೇಂದ್ರನು ಕಟ್ಟಿಸುತ್ತಿರುವ ಹೊಸ ಮನೆಯಲ್ಲಿ ನಗದು 70 ಲಕ್ಷ ರೂಗಳು ದೊರೆತಿದ್ದು, ಸದರಿ ಹಣವನ್ನು ಪ್ರಕರಣದಲ್ಲಿ ಅಮಾನತ್ತು ಪಡಿಸಿಕೊಳ್ಳದೆ ಫಿರ್ಯಾದುದಾರರಾದ ರಂಗಸ್ವಾಮಿರವರಿಗೆ ವಾಪಸ್ಸು ನೀಡುವಂತೆ ಪಿ.ಎಸ್.ಐ-1 ಶ್ರೀ ಗಿರೀಶ್ ರವರಿಗೆ ಸೂಚನೆ ನೀಡಿ ವಾಪಸ್ಸು ಕೊಡಿಸಿರುತ್ತೀರಿ.

3.    ವಿಚಾರಣೆಗಾಗಿ ಕರೆತಂದಿದ್ದ ಕೆ. ಪ್ರಕಾಶನು ಕೃತ್ಯದಲ್ಲಿ ಭಾಗಿಯಾಗಿರುವುದು ಖಚಿತವಾಗಿ ತಿಳಿದಿದ್ದರೂ ಸಹ ಆತನನ್ನು ದಸ್ತಗಿರಿ ಮಾಡಲು ಪಿ.ಎಸ್.ಐ ರವರಿಗೆ ಸೂಚನೆ ನೀಡಿರುವುದಿಲ್ಲ. ವಿಚಾರಣೆ ವೇಳೆಯಲ್ಲಿ ಪ್ರಕಾಶನು ಆತನ ಮನೆಯಿಂದ ಹಾಜರುಪಡಿಸಿದ 9 ಲಕ್ಷ ರೂ.ಗಳನ್ನು ಸಿಬ್ಬಂದಿಗಳ ಮೂಲಕ ತರಿಸಿಕೊಂಡು ನೀವೇ ರಂಗಸ್ವಾಮಿಗೆ ವಾಪಸ್ಸು ನೀಡಿರುತ್ತೀರಿ.

4.   ಒಟ್ಟು 79 ಲಕ್ಷ ರೂ.ಗಳನ್ನು ಪಿರ್ಯಾದಿ ಶ್ರೀ ರಂಗಸ್ವಾಮಿಗೆ ದಾಖಲಾತಿಗಳು ಇಲ್ಲದೆ ಹಿಂದಿರುಗಿಸಿದ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿರುವುದಿಲ್ಲ.

5.    79 ಲಕ್ಷ ರೂ. ಗಳು ದೊರೆತ ಮೇಲಾದರೂ ಪ್ರಕರಣವನ್ನು ಗಂಭೀರ ಸ್ವರೂಪ ಪ್ರಕರಣ ಎಂದು ಪರಿಗಣಿಸಿ, ನ್ಯಾಯಾಲಯಕ್ಕೂ ಹಾಗೂ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸದೆ ತಮ್ಮ ಕರ್ತವ್ಯದಲ್ಲಿ ಲೋಪವೆಸಗಿ, ಕೇಸಿನ ತನಿಖಾ ಹಾದಿಯನ್ನು ದಿಕ್ಕುತಪ್ಪಿಸಿ, ಆರೋಪಿಗಳಿಗೆ ಪರೋಕ್ಷ ಸಹಾಯ ಮಾಡಿರುವುದು ಖಚಿತವಾಗಿರುತ್ತದೆ. ಅಲ್ಲದೆ ಕೇಸಿನ ಪಿರ್ಯಾದಿ ಶ್ರೀ ರಂಗಸ್ವಾಮಿಗೆ 1 ಕೋಟಿ 56 ಲಕ್ಷ ರೂ. ಹಣ ಯಾವ ಆಧಾಯ, ಮೂಲದಿಂದ ಬಂದಿದೆ ಎಂಬ ಬಗ್ಗೆ ಮತ್ತು ನಾಗೇಂದ್ರನ ಮನೆಯಲ್ಲಿ ಇಡುವ ಅವಶ್ಯಕತೆ ಏನಿತ್ತೆಂಬುದರ ಬಗ್ಗೆಯೂ ಸಹ ವಿಚಾರಣೆ ನಡೆಸಿರುವುದಿಲ್ಲ.

ಷರಾ : ಮೇಲ್ಕಂಡ ಆರೋಪದ ಮೇಲೆ ಅರ್ಜಿದಾರರ ಸಮಜಾಯಿಷಿ ಪಡೆದು, ಅದನ್ನೊಪ್ಪದ ಶಿಸ್ತು ಪ್ರಾಧಿಕಾರ ಹಾಗೂ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರ ಆದೇಶ ಸಂಖ್ಯೆ :174/ಡಿಇ-2/ಸಿಓಪಿ/2013, ದಿನಾಂಕ: 08/04/2014 ರಲ್ಲಿ ಇವರಿಗೆ ಅಮಾನತ್ತು ಆದೇಶ ಜಾರಿಯಾದ ದಿನಾಂಕ : 10.03.2014 ರಿಂದ ದಿನಾಂಕ : 08.04.2014 ರವರೆಗೆ ಒಟ್ಟು 30 ದಿನಗಳು ಅಮಾನತ್ತಿನಲ್ಲಿ ಕಳೆದ ಅವಧಿಯನ್ನು ಅಮಾನತ್ತಿನ ನಿರ್ದಿಷ್ಟ ಶಿಕ್ಷೆಯೆಂದು ದಂಡನೆಯನ್ನು  ವಿಧಿಸಿರುತ್ತಾರೆ.

ಇಷ್ಟೆಲ್ಲ ಆರೋಪಗಳನ್ನ ಹೊರಿಸಲಾಗಿದ್ದರೂ ಕೂಡ ಸತ್ಯಾ ಸತ್ಯತೆ ಹೊರ ಬೀಳಲು ಸಿಐಡಿ ತನಿಖಾವರದಿ ಬರುವ ವರೆಗೆ ಕಾಯಲೇಬೇಕು.

Comments are closed.