ಡಿವೈಡರ್ ಗೆ ಪಿಕಪ್ ವಾಹನ ಡಿಕ್ಕಿ : ಓರ್ವ ಸಾವು, ಮತ್ತೋರ್ವನ ಸ್ಥಿತಿ ಗಂಭೀರ

ಡಿವೈಡರ್ ಗೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಕುಡ್ಲೂರು ಬಳಿ ನಡೆದಿದೆ.

ಮಹಮದ್ ಅಲಿ (22) ಮೃತ ದುರ್ದೈವಿ. ಚಾಲಕ ಡಿವೈಡರ್ ಗೆ ಗುದ್ದಿದ ರಬಸಕ್ಕೆ ಡಿವೈಡರ್ ಕಬ್ಬಿಣ ಪಿಕಪ್‍ನ ಮುಂದೆ ಹೋಗಿ ಹಿಂದೆ ಬಂದಿದೆ. ಗಾಯಾಳನ್ನು ತರೀಕೆರೆ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ.

ಬೀರೂರು ಪೊಲೀಸರು ಸ್ಥಳಕ್ಕೆ ಭೇಟಿ  ಪರಿಶೀಲನೆ ನಡೆಸಿದ್ದಾರೆ.

Leave a Reply