ಡ್ರೈವಿಂಗ್ ಲೈಸನ್ಸ್ ಕೇಳಿದ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಆಸ್ಟ್ರೇಲಿಯನ್ನರು….!

ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಮೂವರು ಆಸ್ಟ್ರೇಲಿಯಾ ಮೂಲದ ಪ್ರವಾಸಿಗರನ್ನು ತಡೆದ ಪೊಲೀಸರು ವಾಹನದ ವಿಮೆ, ಡ್ರೈವಿಂಗ್ ಲೈಸನ್ಸ್ ತೋರಿಸುವಂತೆ ಕೇಳಿದಾಗ ಕೋಪಗೊಂಡ ವಿದೇಶಿಗರು ಪೊಲೀಸರೊಂದಿಗೆ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಜಿಲ್ಲೆಯ  ಗಂಗಾವತಿ ನಗರದಲ್ಲಿ ಪೊಲೀಸ್ ತಪಾಸಣೆ ವೇಳೆ ಸಹಕಾರ ನೀಡದೇ ಆಸ್ಟ್ರೇಲಿಯಾದ ಇಬ್ಬರು ಯುವತಿಯರು, ಓರ್ವ ಯುವಕ ದುರ್ವರ್ತನೆ ತೋರಿದ್ದಾರೆ..ಆನೆಗೊಂದಿ ಸುತ್ತಮುತ್ತಲ ಪ್ರದೇಶದ ಪ್ರವಾಸಕ್ಕೆಂದು ಆಸ್ಟ್ರೇಲಿಯನ್ನರು, ದ್ವಿಚಕ್ರವಾಹನದಲ್ಲಿ ಮೂರು ಜನ ಬಂದಿದ್ದಾರೆ. ಇದನ್ನು ಸಂಚಾರಿ ಪೊಲೀಸರು ಪ್ರಶ್ನಿಸಿದ್ದು, ವಾಹನದ ವಿಮೆ, ಡ್ರೈವಿಂಗ್ ಲೈಸನ್ಸ್ ತೋರಿಸುವಂತೆ ಕೋರಿದ್ದಾರೆ. ಇಷ್ಟಕ್ಕೇ ಸಿಟ್ಟಿಗೆದ್ದ ಪ್ರವಾಸಿಗರು, ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರೆದು ಡ್ರೈವಿಂಗ್ ಲೈಸನ್ಸ್​​, ವಿಮೆ ಕೇಳಿದ್ದಕ್ಕೆ ಪೊಲೀಸರೊಂದಿಗೆ ವಿದೇಶಿಗರ ದುರ್ವರ್ತನೆ ಸಾರ್ವಜನಿಕ ಪ್ರದೇಶದಲ್ಲಿ ವಿದೇಶಿಗರು ಅನುಚಿತವಾಗಿ ವರ್ತಿಸಿದ್ದರಿಂದ ಠಾಣೆಗೆ ಬರುವಂತೆ ಸೂಚನೆ ನೀಡಿ ವಾಹನ ಸಮೇತ ಪೊಲೀಸರು ತೆರಳಿದ್ದಾರೆ. ಠಾಣೆಗೆ ಬಂದ ವಿದೇಶಿಗರ ಪೈಕಿ ಚಾಲರ್ ಎಂಬ ಮಹಿಳೆ ಪೊಲೀಸರ ಫೊಟೋ ಕ್ಲಿಕ್ಕಿಸುವುದು, ಠಾಣೆಯ ಚಿತ್ರಗಳನ್ನು ತಮ್ಮ ಮೊಬೈಲ್​​​ನಲ್ಲಿ ಸೆರೆ ಹಿಡಿದು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾಳೆ ಎನ್ನಲಾಗ್ತಿದೆ. ಈ ಕುರಿತು ಮಾತನಾಡಿರುವ ಸಂಚಾರಿ ಪಿಎಸ್ಐ ನಾಗರಾಜ್, ಒಂದೇ ವಾಹನದಲ್ಲಿ ಮೂರು ಜನ ಬಂದಿದ್ದಾರೆ. ಡ್ರೈವಿಂಗ್ ಲೈಸನ್ಸ್, ಇನ್ಷುರೆನ್ಸ್ ಯಾವುದೂ ಇಲ್ಲ. ಪ್ರಶ್ನಿಸಿದ್ದಕ್ಕೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published.