ತನ್ವೀರ್ ಸೇಠ್ ಮೇಲೆ‌ ದಾಳಿಗೆ ಪರೋಕ್ಷವಾಗಿ ಸಿದ್ದರಾಮಯ್ಯ ಕಾರಣ – ಬಿಎಸ್ ವೈ ಹೇಳಿಕೆಗೆ ಸಿದ್ದು ತಿರುಗೇಟು

ತನ್ವೀರ್ ಸೇಠ್ ಮೇಲೆ‌ ದಾಳಿಗೆ ಪರೋಕ್ಷವಾಗಿ ಸಿದ್ದರಾಮಯ್ಯ ಕಾರಣ ಎಂದು ಚಿಕ್ಕಮಗಳೂರಿನಲ್ಲಿ ಸಿಎಂ ಬಿಎಸ್ ವೈ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

ಕೊಲೆ ಯತ್ನ ಮಾಡಿರುವುದು ಪಿ.ಎಫ್.ಐ ಅಲ್ಲ. ಎಸ್.ಡಿ.ಪಿ.ಐ ಕಾರ್ಯಕರ್ತ ಎಂದು ಪೊಲೀಸರು ಹೇಳಿದ್ದಾರೆ. ಕ್ರಿಮಿನಲ್ ಕೆಲಸ ಮಾಡುವ ಯಾರಿಗೂ ನನ್ನ ಬೆಂಬಲ ಇಲ್ಲ. ಸಿಎಂ ಯಡಿಯೂರಪ್ಪ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದಾರೆ. ಸಿಎಂ ರಾಜಕೀಯಕ್ಕಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ.

ಅನರ್ಹ ಶಾಸಕರು ಅಪರಾಧಿಗಳೆಂದು ಸುಪ್ರೀ ಕೋರ್ಟೇ ಹೇಳಿದೆ. ಕೇವಲ ನಾನು ಮಾತ್ರ ಅಪರಾಧಿಗಳು ಅಂತಾ ಹೇಳಿದ್ದಲ್ಲ. ಸಿಎಂ ಹತಾಶರಾಗಿ ಈ ರೀತಿ ಹೇಳಿಕೆ ನೀಡ್ತಾ ಇದ್ದಾರೆ ಅಷ್ಟೇ  ಎಂದರು.

Leave a Reply