‘ತಾಯಿ ಚಾಮುಂಡೇಶ್ವರಿ ಮುಂದೆ ನಿಂತುಕೊಂಡು ಯೋಚನೆ ಮಾಡಲಿ’ ಕುಮಾರಸ್ವಾಮಿಗೆ ವಿ.ಸೋಮಣ್ಣ ಟಾಂಗ್

14 ತಿಂಗಳು ಕುಮಾರಸ್ವಾಮಿ ಯಾವ ರೀತಿ ಅಧಿಕಾರ ಮಾಡಿದ್ದರು. ತಾಯಿ ( ಚಾಮುಂಡೇಶ್ವರಿ ) ಮುಂದೆ ನಿಂತುಕೊಂಡು ಯೋಚನೆ ಮಾಡಲಿ. ಮೈಸೂರಿನಲ್ಲಿ ಕುಮಾರಸ್ವಾಮಿಗೆ ಸಚಿವ ವಿ.ಸೋಮಣ್ಣ ಟಾಂಗ್ ಕೊಟ್ಟಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ಯಡಿಯೂರಪ್ಪ ಯುವಕರಂತೆ ಸುತ್ತಾಡಿದ್ದಾರೆ. ಎರಡು ಬಾರಿ ಸಿಎಂ ಆಗಿದ್ದವರು ಕುಮಾರಸ್ವಾಮಿ. ತಮ್ಮ ಕಾರ್ಯ ವೈಖರಿ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ದಸರಾ ಐತಿಹಾಸಿಕ ಪಾರಂಪರಿಕ ಆಚರಣೆ. ನಾನು ಎಲ್ಲಾ ತಾಲ್ಲೂಕುಗಳಿಗೆ ಹೋಗಿದ್ದೇನೆ. ಜಿ‌.ಟಿ.ದೇವೇಗೌಡರು ಪ್ರಭಾವಿ ನಾಯಕರು‌, ನಾನು ಎಲ್ ಬೋರ್ಡ್ ಅಲ್ಲ‌. ಇಲ್ಲಿ ಯಾರು ಯಾರಿಗೂ ದೊಡ್ಡವರಲ್ಲ. ಕಲಿಯುವುದು ನಿರಂತರವಾಗಿ ಇರುತ್ತದೆ.
ದಸರಾ ಬಗ್ಗೆ ಕುಮಾರಸ್ವಾಮಿ ಸಲಹೆ ಇದ್ದರೆ ಕೊಡಲಿ. ಇದು ನಾಡಹಬ್ಬ ಎಲ್ಲರೂ ಮಾಡಬೇಕಾದ ಹಬ್ಬ. ಕೇಂದ್ರದ ನಾಯಕರಿಗೂ ದಸರೆಗೆ ಆಹ್ವಾನ ನೀಡಲಾಗುವುದು. ಕುಮಾರಸ್ವಾಮಿ ರಾಜಕಾರಣಕ್ಕೆ ಬಂದಿದ್ದು 1996ರಲ್ಲಿ. ನಾನು ರಾಜಕಾರಣಕ್ಕೆ ಬಂದಿದ್ದು 1983ರಲ್ಲಿ. ಕುಮಾರಸ್ವಾಮಿ ಅದೃಷ್ಠದಿಂದ ಮುಖ್ಯಮಂತ್ರಿ ಆದವರು. ಅದೃಷ್ಠ ಯಾರ ಅಪ್ಪನ ಮನೆ ಸ್ವತ್ತು ಅಲ್ಲ.

ಅವರಿಗೆ ಅದೃಷ್ಟ ಇತ್ತು ಮುಖ್ಯಮಂತ್ರಿ ಆದರೂ, ನಾನು ಮಂತ್ರಿ ಆದೆ ಅಷ್ಟೇ. ದಸರಾ ಮುಗಿದ ನಂತರ ಒಂದು ಕ್ಷಣ ವ್ಯರ್ಥ ಮಾಡದೆ ವಸತಿ ಇಲಾಖೆ ಕೆಲಸ ಮಾಡುತ್ತೇನೆ. ಮೈಸೂರಿನಲ್ಲಿ ಹೆಚ್‌ಡಿಕೆ ಹೇಳಿಕೆಗೆ ಸಚಿವ ವಿ.ಸೋಮಣ್ಣ ತಿರುಗೇಟು ಕೊಟ್ಟಿದ್ದಾರೆ.

Leave a Reply