ತೀರ್ಪು ಏನೇ ಬಂದರೂ ಅದು ಭಾರತಕ್ಕೆ ಹೊಸ ಅಧ್ಯಾಯ – ಅಣ್ಣಾಮಲೈ ಟ್ವೀಟ್

ದೇಶದ ಜನತೆ ಅಯೋಧ್ಯೆ ತೀರ್ಪಿಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಮಾಜಿ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ತೀರ್ಪು ಏನೇ ಬಂದರೂ ಅದು ಭಾರತಕ್ಕೆ ಹೊಸ ಅಧ್ಯಾಯ ಆರಂಭವಾಗಿರಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಅಣ್ಣಾಮಲೈ ತಮ್ಮ ಟ್ವಿಟ್ಟರಿನಲ್ಲಿ, ಅಯೋಧ್ಯೆ ಬಗ್ಗೆ ಏನೇ ತೀರ್ಪು ಬಂದರೂ ಅದು ಹೊಸ ಭಾರತಕ್ಕೆ ಮುನ್ನುಡಿ. ಈ ದಿನವು ಮಾನವೀಯತೆಗೆ ಶಾಂತಿ, ಸಹನೆ ಹಾಗೂ ಗೌರವವನ್ನು ನೀಡಲಿ. ನಾವು ಸ್ವತಃ ಹೇರಿದ ಗುರುತುಗಳನ್ನು ತೆಗೆದು ಹಾಗೂ ನಮ್ಮ ‘ಭಾರತೀಯ’ ಗುರುತನ್ನು ಮೊದಲು ತರುವ ದಿನ ಆಗಿರಬೇಕು” ಎಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ನೋಡಿ ಅಣ್ಣಾಮಲೈ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು, “ನೀವು ಹೇಳಿದ್ದು ನಿಜ ಸರ್, ನಾವು ಮೊದಲು ಭಾರತೀಯರಾಗಿರಬೇಕು” ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಅಣ್ಣಾಮಲೈ ಅವರ ಮಾತನ್ನು ಒಪ್ಪಿಕೊಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇತ್ತ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ತಮ್ಮ ಟ್ವಿಟ್ಟರಿನಲ್ಲಿ, “ಅಯೋಧ್ಯೆ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಏನೇ ತೀರ್ಪು ಬಂದರೂ, ಅದು ಯಾರೊಬ್ಬರ ಗೆಲುವು ಅಥವಾ ಸೋಲು ಆಗುವುದಿಲ. ಈ ನಿರ್ಧಾರವು ಭಾರತದ ಶಾಂತಿ ಹಾಗೂ ಸದ್ಭಾವನೆಯ ಶ್ರೇಷ್ಠ ಸಂಪ್ರದಾಯವನ್ನು ಮತ್ತಷ್ಟು ಬಲಪಡಿಸಬೇಕು ಎಂಬುದು ನಮ್ಮೆಲ್ಲರ ಆದ್ಯತೆಯಾಗಿರಬೇಕು ಎಂದು ದೇಶದ ಜನತೆ ಬಳಿ ಮನವಿ ಮಾಡಿಕೊಳ್ಳುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

https://twitter.com/annamalai_k?ref_src=twsrc%5Etfw%7Ctwcamp%5Etweetembed%7Ctwterm%5E1193008119753785345&ref_url=https%3A%2F%2Fpublictv.in%2Fwhichever-way-the-ayodhya-verdict-goes-today-this-should-be-the-beginning-of-a-new-chapter-for-india-annamalai%2Famp

Leave a Reply

Your email address will not be published.