ತೆರೆ ಕಂಡ ಮೊದಲನೇ ದಿನವೇ ಭಾರೀ ಜನ ಮನ ಗೆದ್ದ ‘ಸೈರಾ ನರಸಿಂಹ ರೆಡ್ಡಿ’

ಬಹು ನಿರೀಕ್ಷಿತ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾ ರಿಲೀಸ್ ಆಗಿದೆ. ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಚಿತ್ರ ಬಿಡುಗಡೆಯಾಗಿದೆ. ಮೆಗಾಸ್ಟಾರ್ ಚಿರಂಜೀವಿ, ಅಮಿತಾಬ್ ಬಚ್ಚನ್, ಕಿಚ್ಚ ಸುದೀಪ್, ತಮನ್ನಾ ಭಾಟಿಯಾ ,ಅನುಷ್ಕಾ ಶೆಟ್ಟಿ, ವಿಜಯ್ ಸೇತುಪತಿ, ನಿಹಾರಿಕಾ, ತ್ರಿವೇಣಿ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ವಿಶ್ವದಾದ್ಯಂತ ಇಂದು 3500 ಸಾವಿರ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಿದೆ.

2017ರಲ್ಲಿ ‘ಖೈದಿ ನಂ150’ ಸಿನಿಮಾ ನಂತರದಲ್ಲಿ ಚಿರಂಜೀವಿ ಸಿನಿಮಾ ಬಿಡುಗಡೆಯಾಗುತ್ತಿದೆ. ನಮ್ಮ ರಾಜ್ಯದಲ್ಲೂ ಕೂಡ ಮೆಗಾಸ್ಟಾರ್ ಅಬಿಮಾನಿಗಲು ಹೆಚ್ಚಿರೋದರಿಂದ ಚಿತ್ರ ನೋಡಲು ಅಭಿಮಾನಗಳ ದಂಡೇ ಬಂದಿತ್ತು. ಬೆಂಗಳೂರಿನ ವಿವಿಧ ಚಿತ್ರಮಂದಿರಗಳಲ್ಲಿ ಸೈರಾ ನರಸಿಂಹ ರೆಡ್ಡಿ ತೆರೆ ಕಂಡಿದೆ. ಉರ್ವಶಿ ಚಿತ್ರಮಂದಿರದಲ್ಲಿ ಮಿಡ್‌ನೈಟ್ ಶೋಗಳು ಕೂಡ ಫುಲ್ ಆಗಿತ್ತು. ಸೈರಾ ನರಸಿಂಹ ರೆಡ್ಡಿ ಚಿತ್ರಕ್ಕೆ ಅಭಿಮಾನಿಗಳು ಬಹುಪರಾಕ್ ಎಂದಿದ್ದಾರೆ. ಥಿಯೇಟರ್‌ನಲ್ಲಿ ನಟ ಚಿರಂಜೀವಿ ಸ್ಕ್ರೀನ್ ಮೇಲೆ ಬರುತ್ತಿದ್ದಂತೆ ಘೋಷಣೆ ಕೂಗಿ, ಕುಣಿದು ಫ್ಯಾನ್ಸ್ ಸಂಭ್ರಮಪಟ್ಟಿದ್ದಾರೆ. ಮಳೆ ಇದ್ದರೂ ಕೂಡ ಅಭಿಮಾನಿಗಳು ಸಿನಿಮಾ ನೋಡಿದ್ದಾರೆ. ಬೆಂಗಳೂರಿನಲ್ಲಿ ಮೊದಲ ಶೋಗಳಿಗೆ 1200ರೂಪಾಯಿ ಫಿಕ್ಸ್ ಮಾಡಲಾಗಿದೆ, ತದನಂತರದ ಶೋಗಳಿಗೆ 350 ರೂಪಾಯಿ ಇದೆ.

ಬೆಂಗಳೂರಿನ ಎಂ.ಜಿ.ರೋಡ್‌ನಲ್ಲಿರುವ ಶಂಕರ್‌ನಾಗ್ ಥಿಯೇಟರ್‌ನಲ್ಲಿ ಬೆಳಗಿನ ಜಾವ 3.30ಕ್ಕೆ ಶೋ ಪ್ರಾರಂಭವಾಗಿತ್ತು. ದೊಡ್ಡ ಬಜೆಟ್, ದೊಡ್ಡ ತಾರಾಗಣ ಹೊಂದಿರುವ ಈ ಐತಿಹಾಸಿಕ ಚಿತ್ರಕ್ಕೆ ನಟ ರಾಮ್ ಚರಣ್ ತೇಜ ಬಂಡವಾಳ ಹೂಡಿದ್ದರು. ಸ್ವಾತಂತ್ರ್ಯ ಹೋರಾಟಗಾರನ ಪಾತ್ರ ಮಾಡಬೇಕು ಎನ್ನುವುದು ಮೆಗಾಸ್ಟಾರ್ ಕನಸಾಗಿತ್ತು., ಈ ಸಿನಿಮಾ ಕಥೆ ಕೇಳಿ 12 ವರ್ಷದ ನಂತರ ಅಂದರೆ ಈಗ ಚಿತ್ರ ತೆರೆಗೆ ಬಂದಿದೆ.

ಆಂಧ್ರದಲ್ಲಿ ದಿನಕ್ಕೆ ಆರು ಶೋಗಳನ್ನು ಮಾಡಲಾಗುವುದಂತೆ. ಇದಕ್ಕೆ ಆಂಧ್ರ ಸರ್ಕಾರ ಅನುಮತಿ ನೀಡಿದೆ. ಈ ಬಗ್ಗೆ ಆಂಧ್ರ ಸರ್ಕಾರ ನೀಡಿದ ಪತ್ರವೊಂದನ್ನು ಮೆಗಾಸ್ಟಾರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮತ್ತು ಕೋನಿಡೆಲಾ ಪಿಆರ್‌ಒ ಕಂಪೆನಿಯ ಅಫೀಶಿಯಲ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

Leave a Reply