ದಸರಾದಲ್ಲು ಮೋದಿ ಮಯ : ದಸರಾ ಸ್ತಬ್ಧಚಿತ್ರದಲ್ಲಿ ಮೋದಿ ಜನಪ್ರೀಯ ಯೋಜನೆ ಬಿತ್ತರ

ಮೋದಿ… ಮೋದಿ.. ನಮೋ ನಮೋ… ಎಲ್ಲೆಲ್ಲೂ ಮೋದಿ ಹವಾ.. ಮೋದಿ ಜಪಾ.. ಈ ಹವಾ ಸದ್ಯ ಮೈಸೂರು ದಸರಾಕ್ಕೂ ಕೂಡ ಹಬ್ಬಲಿದೆ.

ಹೌದು…  ದಸರಾದಲ್ಲು ಮೋದಿ ಮಯ ಶುರುವಾಗಿದೆ.  ಈ ಬಾರಿಯ ದಸರಾ ಸ್ತಬ್ಧಚಿತ್ರದಲ್ಲಿ ಮೋದಿ ಜನಪ್ರೀಯ ಯೋಜನೆ ಬಿತ್ತರವಾಗಲಿವೆ. ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ,  ಕೇಂದ್ರ ಸರ್ಕಾರದ ಯೋಜನೆಗಳ ಟ್ಯಾಬ್ಲೋ ಮಾಡಲು ನಿರ್ಧಾರ ಮಾಡಿದ್ದೇವೆ.

ಜೊತೆಗೆ ದಸರಾದಲ್ಲಿ ಮೈಸೂರು ಸಂಸ್ಥಾನದ ಸಾಧನೆ, ಸಿದ್ದಗಂಗಾ ಶ್ರೀ, ಆದಿಚುಂಚನಗಿರಿ ಹಾಗೂ ಸುತ್ತೂರು ಶ್ರೀಗಳ ಸಾಧನೆ ಬಿತ್ತರವಾಗಲಿವೆ. ವಿಶಿಷ್ಠ ಮಾದರಿಯಲ್ಲಿ ಈ ಬಾರಿಯ ಸ್ತಬ್ದಚಿತ್ರ ನಡೆಯಲಿವೆ ಎಂದು ತಿಳಿಸಿದ್ದಾರೆ.

Leave a Reply