‘ದೇವೇಗೌಡರೇ ನಿಮ್ಮನ್ನು ಸೋಲಿಸಿದ್ದು’ ಮಾಜಿ ಶಾಸಕ ಸಿಎಸ್,ಪುಟ್ಟೇಗೌಡ ಟೀಕೆ

ದೇವೇಗೌಡರೇ ನಿಮ್ಮನ್ನು ಸೋಲಿಸಿದ್ದು ನಿಮ್ಮ ಮಕ್ಕಳು, ಸೊಸೆ ಮತ್ತು ಮೊಮ್ಮಕ್ಕಳು 2000 ನೇ ಸಾಲಿನ ಆಚೆಗಿನ ರಾಜಕಾರಣ ಈಗ ನಡೆಯಲ್ಲಾ ಎಂದು ಮಾಜಿ ಶಾಸಕ ಸಿಎಸ್,ಪುಟ್ಟೇಗೌಡ ದೇವೇಗೌಡರ ವಿರುದ್ದ ಟೀಕಿಸಿದ್ದಾರೆ.

ಹಾಸನದಲ್ಲಿ ದೋಸ್ತಿ ಬಿಟ್ಟು ಕೈ ನಾಯಕರು ಜೆಡಿಎಸ್ ವಿರುದ್ದ ಹೋರಾಟಕ್ಕಿಳಿದಿದ್ದು, ಚನ್ನರಾಯಪಟ್ಟಣದಲ್ಲಿ ಕಾಂಗ್ರೆದ್ ನಿಂದ ಬೃಹತ್ ಪ್ರತಿಭಟನೆಯಲ್ಲಿ  ಸಾಲಾಮನ್ನಾ ಹಣ‌ ದುರುಪಯೋಗ, ಭ್ರಷ್ಟಾಚಾರ, ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಲಾಯಿತು. ಪಾಪ ಆ ಡಿಕೆಶಿ ಮಂಗನಂತೆ ನಿಮ್ಮ ಅಧಿಕಾರ ಉಳಿಸಲು ಹೋರಾಡಿದ ಆದರೆ ನೀವು ಅವನ ಪರವಾಗಿ ಹೋರಾಟಕ್ಕೆ ಬರಲಿಲ್ಲಾ ಎಂದು ಗುಡುಗಿದ್ರು.

ಮಾಜಿ ಸಚಿವ ಬಿ.ಶಿವರಾಂ, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ಮಾಜಿ ಶಾಸಕ ಪುಟ್ಟೇಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹೆಚ್,ಡಿ,ದೇವೇಗೌಡರ ಕುಟುಂಬದ ವಿರುದ್ದ ಟೀಕೆಗೆ ವೇದಿಕೆಯಾಯಿತು. ಜಿಲ್ಲೆಯಲ್ಲಿ ಸಾಲಾ ಮನ್ನಾ ಯೋಜನೆಯಲ್ಲಿ 800 ಕೋಟಿ ಅವ್ಯವಹಾರದ ಬಗ್ಗೆ ತನಿಖೆಗೆ ಮಾಡಬೇಕು ಎಂದು ಸರ್ಕಾರವನ್ನ ಒತ್ತಾಯಿಸಿದ್ರು.

Leave a Reply

Your email address will not be published.