ಧಾರಾಕಾರ ಮಳೆಗೆ ಒಡೆದ ಮೂರು ಕೆರೆಗಳು : ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ‌ ನಾಶ

ಮಂಡ್ಯದ ಕೆ.ಆರ್.ಪೇಟೆಯಲ್ಲಿ ನೆನ್ನೆ ರಾತ್ರಿ  ಭಾರೀ ಮಳೆ ಸುರಿದಿದೆ.ಧಾರಾಕಾರವಾಗಿ ಸುರಿದ ಮಳಗೆ ಕೆ.ಆರ್.ಪೇಟೆ ತಾಲೂಕಿನಲ್ಲಿ‌ ಮೂರ್ನಾಲ್ಕುಕೆರೆ ಒಡೆದು  ಭಾರೀ ಅನಾಹುತ ಸೃಷ್ಟಿ ಮಾಡಿದ್ದು ರೈತರ ಬದುಕನ್ನು ಕಿತ್ತುಕೊಂಡದೆ. ಅಲ್ದೆ ಮನೆಯಲ್ಲಿ ಮಲಗಿದ್ದ ರೈತನ‌ ಮೇಲೆ ಮನೆಯ ಗೋಡೆ ಬಿದ್ದು ಸಾವಿಗೀಡಾಗಿದ್ದಾನೆ.ಕೆ.ಆರ್‌‌.ಪೇಟೆ ತಾಲೂಕಿನಲ್ಲಿ ರಾತ್ರಿ ಸುರಿದ ಭಾರೀ ಮಳೆ ತಾಲೂಕಿನಲಗಲಿ ಸೃಷ್ಟಿಸಿದ ಅನಾಹುತದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಹೌದು! ರಾತ್ರಿ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನಲ್ಲಿ ರಾತ್ರಿ ಧಾರಾಕಾರ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ಶೀಳನೆರೆಯ ಹೋಬಳಿ ವ್ಯಾಪ್ತಿಯ ರಾಯಸಮುದ್ರ,ಸಿಂಧಘಟ್ಟ,ಹರಹಳ್ಳಿ ಕೆರೆಗಳು ಒಡೆದಿದ್ರಿಂದ ಏಕಾಏಕಿ ಆ ಭಾಗದ ಚನ್ನಾಪುರ, ಬ್ಯಾಲದ ಕೆರೆ,ಸಿಂಧಘಟ್ಟ ಸೇರಿದಂತೆ ಕೆರೆ ಅಚ್ಚುಕಟ್ಟು ವ್ಯಾಪ್ತಿಯ ರೈತರ ಜಮೀನಿಗೆ ನೀರು ನುಗ್ಗಿದೆ. ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಜಮೀನಿನಲ್ಲಿ ಬೆಳೆದಿದ್ದ ಸಂಪೂರ್ಣವಾಗಿ ನಾಶವಾಗಿದ್ದು, ಹಲವು ಕಡೆ ರೈತರ ಜಮೀನು ಸಂಪೂರ್ಣ ಕೊಚ್ಚಿ ಹೋಗಿವೆ.ಬೆಳೆ ಕಳೆದುಕೊಂಡ ರೈತರು ಪರಿಹಾರಕ್ಕಾಗಿ ತಾಲೂಕು ಆಳಿತವನ್ನು ಒತ್ತಾಯಿಸಿದ್ದಾರೆ.

ಇನ್ನು ನೆನ್ನೆ ಬೆಳ್ಗೆಯಿಂದಲೇ ಸುರಿದ ಮಳೆಯಿಂದ ಕೆ.ಆರ್.ಪೇಟೆ ಶೀಳನೆರೆ ಭಾಗದ ಪ್ರಮುಖ ಕೆರೆಯಾಗಿರುವ ರಾಯಸಮುದ್ರದ ಕೆರೆ ಭಾರೀ ನೀರಿಗೆ ತುಂಬಿ ಹರಿದು ಕೋಡಿ ಬಿದ್ದ ಕಾರಣ ಆ ಕಾರಣ ಆ ಕೆರೆ ಸಂಪೂರ್ಣ ಅಪಾಯದ ಸ್ಥಿತಿಯಲ್ಲಿದ್ದೆ.‌ಅಪಾರ ಪ್ರಮಾಣದ ನೀರು ರಾಯಸಮುದ್ರ ಕೆರೆಯಿಂದ ಹರಿದಿರೋ ಕಾರಣ ಸ್ಥಳಕ್ಕೆ ತಹಶೀಲ್ದಾರ್, ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆರೆ ದುರಸ್ಥಿ ಕಾರ್ಯಕ್ಕೆ ಮುಂದಾಗಿದ್ದಾರೆ. ಇನ್ನು ನೆನ್ನೆ ರೀತಿ ಇವತ್ತು ಕೂಡ ಮಳೆಯಾದ್ರೆ ರಾಯಸಮುದ್ರ ಕೆರೆ ಒಡೆಯುವ ಎಚ್ಚರಿಕೆ ನೀಡಿದ್ದು ಮತ್ತಷ್ಟು ಅನಾಹುತವಾಗುವ ಬಗ್ಗೆ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಎಚ್ಚರಿಕೆ ನೀಡಿದ್ದಾರೆ.

ಇನ್ನು ಮೂರು ಕೆರೆಗಳು ಒಡೆದ ಕಾರಣ ರೈತರ ನೂರಾರು ಎಕರೆ ಜಮೀನುಗಳು ಜಾಲವೃತವಾಗಿದ್ದು,ರೈತರ ಬೆಳೆಗಳು ನಾಶವಾಗಿದೆ‌.ಇನ್ನು ಹಲವೆಡೆ ಸೇತುವೆ ಮತ್ತು ರಸ್ತೆಗಳು ಕೂಡ ಕೊಚ್ಚಿಹೋಗಿವೆ.ಜೊತೆಗೆ ಹಳ್ಳಕೊಳ್ಳದಲ್ಲಿ ಭಾರೀ ನೀರು ಹರಿದ ಕಾರಣ ತೊರೆಗಳು ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದ್ದು ಬಹುತೇಕ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ.ಇನ್ನು ಕೆ.ಆರ್.ಪೇಟೆಯ ಮುರುಕನಹಳ್ಳಿ ಬಳಿ ರಸ್ತೆ ಮೇಲೆ ಭಾರೀ ಪ್ರಮಾಣದ ನೀರು ಸೇತುವ ಮೇಲೆ ಹರಿದ ಕಾರಣ ಮೈಸೂರು-ಚನ್ನರಾಯಪಟ್ನ ಹೆದ್ದಾರಿ ಸಂಚಾರ ಬಂದ್ ಆಗಿತ್ತು.ಇದರ ಜೊತೆಗೆ ಚನ್ನಾಪುರ ಬ್ಯಾಲದ ಕೆರೆ ಬಳಿ ಕೂಡ ಸೇತುವೆ ಮುಳುಗಡೆಯಾಗಿ ಗ್ರಾಮೀಣ ಭಾಗದ ಸಂಪರ್ಕ ಕಡಿತಗೊಂಡಿತ್ತು.ಹಳ್ಳಗಳಲ್ಲಿ ಭಾರೀ ಪ್ರಮಾಣದ ನೀರಿ ಹರಿದ ಕಾರಣ ರಸ್ತೆ ಮತ್ತು ಹಲವು ಸೇತುವೆಗಳು‌ ಕೊಚ್ಚಿ ಹೋಗಿವೆ. ಅಲ್ದೆ ಗಂಜಿಗೆರೆ ಬಳಿ ಭಾರಿ ಮಳೆಗ ಮನೆ ಕುಸಿದು ರೈತ ಮೃತಪಟ್ಟಿದ್ದಾನೆ. ತಾಲೂಕಿನ ಹಲವಡೆ ಮಳೆಗೆ ಮನೆ ಕುಸಿತವಾಗಿರೋ ಪ್ರಕರಣಗಳು ಕೂಡ ನಡೆದಿದ್ದು ತಾಲೂಕು ಆಡಳಿತ ಸಾಕಷ್ಟು ಪರಿಹಾರ ಕ್ರಮಗಳನ್ನು ಕೈಗೊಂಡಿದ್ದು ನೆರವು ನೀಡ್ತಿದ್ದು ಬೆಳೆ ನಾಶವಾಗಿರೋ ರೈತರಿಗೆ ವರದಿ‌ ಆಧಿರಿಸಿ ಬೆಳೆ ಪರಿಹಾರ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.

ಇನ್ನು ರಾಯಸಮುದ್ರ ಕೆರೆಯಿಂದ ಭಾರೀ ಪ್ರಮಾಣದ ನೀರು ಹರಿದು ಕೆಳಗಿನ ಭಾಗದ ಮೂರು ಕೆರೆಗಳ ಒಡೆದ ಕಾರಣ ಕೆ.ಆರ್.ಪೇಟೆ ಪಟ್ಟಣದ ಬಳಿಯ ಹೊಸಹೊಳಲು ಕೆರೆಗೆ ಹರಿದ ಪರಿಣಾಮ ಆ ಭಾಗದ ಕೆರೆ ಕೂಡ ಒಡೆದು ಸುತ್ತಮುತ್ತಲ ಜಮೀನಿಗೆ ನೀರು ನುಗ್ಗಿ್ಎ. ಅಲ್ದೆ. ಸಿ.ಎಂ. ಮನೆದೇವರಾದ ಕಾಪುಮಠಕ್ಕೂ ನೀರು ನುಗ್ಗಿದ್ದು, ಸ್ವತಂತ್ರ ಸಿದ್ದೇಶ್ವರ ಸ್ವಾಮಿ ದೇವಾಲಯ ಸಂಪೂರ್ಣ ಜಲಾವೃತವಾಗಿದೆ.ದೇವಸ್ಥಾನ ಜಲಾವೃತವಾದ ಕಾರಣ ದೇವಾಲಯದ ಪೂಜೆ ಸ್ಥಗಿತಗೊಂಡಿದೆ.ರಾತ್ರಿ ಸುರಿದ ಮಳೆ ಮಳೆಯಿಂದಾ ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಭಾಗದಲ್ಲಿ ಸಾಕಷ್ಟು ಹಾನಿಯಾಗಿದ್ದು ಹಲವೆಡೆ ರೈತರ ಜಮೀನು ಕೊಚ್ಚಿಹೋದ್ರೆ ,ನೂರಾರು ಎಕರೆಯಲ್ಲಿ ಕೈಗೆ ಬರಬೇಕಾಗಿದ್ದ ರೈತಮ ಬೆಳೆ ನಾಶವಾಗಿ ರೈತ ಕಂಗಾಲಾಗಿದ್ದಾನೆ.‌ಕೂಡಲೆ ತಾಲೂಕು ಆಡಳಿತ ಬೆಳೆ ನಷ್ಟವಾದ ರೈತರಿಗೆ ಸೂಕ್ತ ಪರಿಹಾರ ಕೊಡುವಂತೆ ಶೀಳನೆರೆ ಭಾಗದ ಜಿ.ಪಂ. ಸದಸ್ಯ‌ ಮಂಜುನಾಥ್ ತಾಲೂಕು ಅಡಳಿತ ಒತ್ತಾಯಿಸಿದ್ದಾರೆ.

ಒಟ್ಟಾರೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನಲ್ಲಿ ರಾತ್ರಿ ಸುರಿದ ಭಾರೀ ಮಳೆ ಸಾಕಷ್ಟು ಅನಾಹುತ ಸೃಷ್ಟಿ ಮಾಡಿದ್ದು,ಓರ್ವನನ್ನು ಬಲಿ ಪಡೆದಿದೆ. ಇಂದು ಕೂಡ ಭಾರೀ ಮಳೆ ಬೀಳುವ ಸಾಧ್ಯತೆ ಇದ್ದು ನೆನ್ನೆ ರೀತಿ ಇಂದು ಮಳೆ ಬಿದ್ರೆ ಮತ್ತಷ್ಟು ಈ ಭಾಗದಲ್ಲಿ ಮತ್ತಷ್ಟು ಅನಾಹುತವಾಗಲಿದೆ. ಒಂದ್ವೇಳೆ ರಾಯಸಮುದ್ರ ಕೆರೆ ಕೂಡ ಒಡೆದರೆ ಅನ್ನೋ ಆತಂಕ ಈಭಾಗದ ಜನರಲ್ಲಿ ಕಾಡ್ತಿದೆ.

Leave a Reply