ನನಗೆ ಸಾಲ ಕೊಟ್ಟಿದ್ದಕ್ಕೆ ಬಿಎಸ್ ವೈ ಗೆ ಎಂಟಿಬಿ ಮೇಲೆ ಪ್ರೀತಿ – ಸಿದ್ದರಾಮಯ್ಯ

ಆಪರೇಷನ್ ಕಮಲಕ್ಕೆ ಎಂಟಿಬಿ ನಾಗರಾಜ್ ಸಾಲ ಕೊಟ್ಟಿದ್ದಾನೆ. ಅದಕ್ಕೆ ಯಡಿಯೂರಪ್ಪಗೆ ಎಂ.ಟಿ.ಬಿ ನಾಗರಾಜ್ ‌ಮೇಲೆ ಪ್ರೀತಿ ಎಂದು ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಎಂಟಿಬಿ ವಿರುದ್ಧ ಹರಿಹಾಯ್ದಿದ್ದಾರೆ.

ಸಿದ್ದರಾಮಯ್ಯ ತಮ್ಮ ಬಳಿ ಹಣ ಪಡೆದಿದ್ದಾರೆ ಎನ್ನುವ ಎಂಟಿಬಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಆತ ಆಪರೇಷನ್ ಕಮಲದಲ್ಲಿ ಹಣ ಪಡೆದಿಲ್ಲ. ಬದಲಿಗೆ ಅವನೇ ಯಡಿಯೂರಪ್ಪಗೆ ಹಣ ನೀಡಿದ್ದಾನೆ‌. ಆಪರೇಷನ್ ಕೇಸ್‌ನಲ್ಲಿ ಎಂ.ಟಿ.ಬಿ ಒಬ್ಬನೇ ಹಣ ಪಡೆಯದೇ ಕೊಟ್ಟಿರುವುದು. ನಾನು ಎಂ.ಟಿ.ಬಿ ನಾಗರಾಜ್‌ನಿಂದ ಸಾಲನೇ ಪಡೆದಿಲ್ಲ. ಪಡೆದಿಲ್ಲದ ಮೇಲೆ ವಾಪಸ್ಸು ಕೊಡುವುದು ಏನನ್ನು ಎಂದು ಟಾಂಗ್ ಕೊಟ್ಟಿದ್ದಾರೆ.

ಕೃಷ್ಣಭೈರೇಗೌಡ ಸಾಲ ಪಡೆದಿದ್ದ. ಅವನು ವಾಪಸ್ಸು ಕೊಟ್ಟಿದ್ದಾನೆ ಎಂದು ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published.