ನಮ್ಮಲ್ಲಿ ಯಾವುದೇ ಬಣ- ಗುಂಪುಗಾರಿಕೆ ಇಲ್ಲ – ಶೋಭಾ ಕರಂದ್ಲಾಜೆ

ಸಿದ್ದರಾಮಯ್ಯ ಅಂದ್ರೆ, ಟಿಪ್ಪು ಜಯಂತಿ ಮಾಡಿದ್ರು, ಸಮಾಜ-ಸಮಾಜ ಒಡೆದ್ರು, ಲಿಂಗಾಯುತ-ವೀರಶೈವರನ್ನ ಒಡೆದ್ರು ಅನ್ನೋದನ್ನ ಬಿಟ್ಟರೆ ಜನ ಬೇರ್ಯಾವುದನ್ನು ನೆನಪಿಟ್ಟುಕೊಂಡಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವ್ರು, ಅಭಿವೃದ್ಧಿ ಕೆಲಸದಿಂದ ಜನ ಸಿದ್ದರಾಮಯ್ಯನನ್ನ ನೆನಪಿಟ್ಟುಕೊಂಡಿಲ್ಲ. ಇಂತಹಾ ಒಳ್ಳೆ ಅಭಿವೃದ್ಧಿ ಕೆಲಸವಾಯ್ತು, ಇಂತಹಾ ದೊಡ್ಡ ಪ್ರಾಜೆಕ್ಟ್ ಬಂತು ಎಂದು ಯಾರೂ ಸಿದ್ದರಾಮಯನನ್ನ ನೆನಪಿಟ್ಟುಕೊಂಡಿಲ್ಲ ಎಂದ್ರು. ಸಿದ್ದರಾಮಯ್ಯನವರು ಹತಾಶರಾಗಿದ್ದಾರೆ. ಅವರ ಪಕ್ಷದೊಳಗೆ ಅವರು ಅಸ್ತಿತ್ವ ಕಳೆದುಕೊಳ್ತಿದ್ದಾರೆ. ಮುನಿಯಪ್ಪ-ಸಿದ್ದರಾಮಯ್ಯ ಹೇಗೆ ಕಿತ್ತಾಡಿದ್ರು ಅನ್ನೋದನ್ನ ನಾವು ನೋಡಿದ್ದೇವೆ. ಈ ಒಂದು ಹತಾಶೆ ಮನೋಭಾವದಿಂದ ಅವರು ಮಾತನಾಡುತ್ತಿದ್ದಾರೆ. ಬಿಜೆಪಿಯಲ್ಲಿ ಯಾವುದೇ ಗುಂಪುಗಳಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತಿದ್ದೇವೆ ಎಂದ್ರು.

ಕಾಂಗ್ರೆಸ್ಸಿಗರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಯಾಕಂದ್ರೆ, ಕಾಂಗ್ರೆಸ್ಸೋರು ಎನ್.ಡಿ.ಆರ್.ಎಫ್, ಹಾಗೂ ಎಸ್.ಟಿ.ಆರ್.ಎಫ್‍ನಲ್ಲಿ ರಾಜ್ಯಕ್ಕೆ ಎಷ್ಟು ದುಡ್ ಕೊಟ್ರೋ ಅದರ ಎರಡರಷ್ಟು ಹಣವನ್ನ ಐದು ವರ್ಷದಲ್ಲಿ ಮೋದಿ ಸರ್ಕಾರ ರಾಜ್ಯಕ್ಕೆ ಕೊಟ್ಟಿದೆ. ಅಧಿಕಾರವಿದ್ದಾಗ ಕಾಂಗ್ರೆಸ್ ಏನ್ ಮಾಡಿದೆ ಅನ್ನೋದ್ನ ನಾವೇ ನೋಡಿದ್ದೇವೆ ಎಂದ್ರು. ನೆರೆ ಪರಿಹಾರಕ್ಕೆ ತಾತ್ಕಾಲಿಕವಾಗಿ ಹಣ ಬಿಡುಗಡೆಯಾಗಿದೆ. ಎನ್.ಡಿ.ಆರ್.ಎಫ್‍ನಿಂದಲೂ ಹಣ ಬಿಡುಗಡೆಯಾಗಿದೆ. ಶಾಶ್ವತ ಪರಿಹಾರಕ್ಕೆ ಶೀಘ್ರವೇ ಹಣ ಬಿಡುಗೊಡೆಯಾಗುತ್ತೆ ಎಂದ್ರು.

Leave a Reply