ನಾಮಪತ್ರ ಸಲ್ಲಿಸುವ ವೇಳೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಯಡವಟ್ಟು….

ಕೆ.ಆರ್ ಪೇಟೆ ಉಪಚುನಾವಣೆ ಕಾವು ಏರಿದ್ದು, ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣಗೌಡ ಇಂದು ನಾಮಪತ್ರ ಸಲ್ಲಿಕೆ ವೇಳೆ ಯಡವಟ್ಟು ಮಾಡಿದ್ದಾರೆ.

ಹೌದು… ನಾಮಪತ್ರ ಸಲ್ಲಿಸುವ ವೇಳೆ ನಾಮಪತ್ರದಲ್ಲಿರುವ ಅಂಶ ಓದಲು ತಡವಡಿಸಿದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಯಡವಟ್ಟುಮಾಡಿದ್ದಾರೆ.

‘ಬಿ’ ಪಾರಂನ್ನೇ ಚುನಾವಣಾಧಿಕಾರಿಗೆ ನೀಡದ ಬಿಜೆಪಿ ಅಭ್ಯರ್ಥಿ ಮತ್ತು ಅನರ್ಹ ಶಾಸಕ ನಾರಾಯಣಗೌಡ, ಕೇವಲ ‘ಎ’ ಫಾರಂನ್ನು ನೀಡಿದ ಘಟನೆ ನಡೆದಿದೆ. ಚುನಾವಣಾಧಿಕಾರಿ ಶಿವಮೂರ್ತಿ ಬಿ ಪಾರಂ ಕೇಳಿದ ಬಳಿಕ ಬಿ ಫಾರಂ ಹುಡುಕಾಡಿದ ನಾರಾಯಣಗೌಡ ಆಪ್ತ ಸಹಾಯಕ, ಐದು ನಿಮಿಷದ ಬಳಿಕ ಬಿ ಫಾರಂ ನ್ನು ಚುನಾವಣಾಧಿಕಾರಿಗೆ ನೀಡಿದ್ದಾರೆ.

ಈ ವೇಳೆ ನಾಮಪತ್ರದಲ್ಲಿನ ಅಂಶಗಳನ್ನ ಓದಲು ಪತ್ನಿಯ ಸಹಾಯ ಪಡೆದ ನಾರಾಯಣಗೌಡ, ಪತ್ನಿ ದೇವಕಿ ಎಲ್ಲಾ ಅಂಶಗಳನ್ನು ಹೇಳಿದ ಬಳಿಕ ನಾಮಪತ್ರ ಓದಿದ್ದಾರೆ.

Leave a Reply