ಪೋಷಕರ ಕಣ್ಮುಂದೆಯೇ ಮಗು ಸಾವು- ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಷ್ಯ…!

ಈ ದೃಷ್ಯ ನೋಡಿದರೆ ಎಂಥವರ ಮನಸ್ಸೂ ಕಣ್ಣೀರಿಡುತ್ತೆ. ಪೋಷಕರು ಅದರಲ್ಲೂ ತಮ್ಮ ಮಕ್ಕಳೊಂದಿಗೆ ರಸ್ತೆಯ ಮೇಲೆ ಹೋಗುವಾಗ ಏಕೆ ಮುನ್ನೇಚ್ಚರಿಕೆ ವಹಿಸಬೇಕು ಎಂಬುದಕ್ಕೆ ಈ ದೃಷ್ಯ ಸಾಕ್ಷಿಯಾಗಿದೆ.

ಸಿಸಿಟಿವಿಯಲ್ಲಿ ಸೆರೆಯಾದ ಈ ದೃಷ್ಯ ಘೋರವಾಗಿದ್ದು, ತನ್ನ ಸಂಬಂಧಿಕರೊಂದಿಗೆ ರಸ್ತೆಯಲ್ಲಿ ಹೋಗುತ್ತಿದ್ದ ಮೂರು ವರ್ಷದ ಪುಟ್ಟ ಬಾಲಕ ರಸ್ತೆಯ ಮೇಲೆ ಓಡಿ ಹೋಗುವಾಗ ಟಂಟಂವೊಂದು ಢಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.
ಈ ಭಯಾನಕ ಘಟನೆ ನಡೆದಿದ್ದು ಬಸವಣ್ಣನ ತವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ನಗರದಲ್ಲಿ. 3 ವರ್ಷದ ಬಾಲಕ ಭೀಮನಗೌಡ ಮೇಲ್ದಾಪೂರ ಈ ಅಪಘಾತದಲ್ಲಿ ಸಾವಿಗೀಡಾಗಿದ್ದಾನೆ. ಬಾಲಕ ರಸ್ತೆ ದಾಟುವಾಗ ಟಂಟಂ ಡಿಕ್ಕಿಯಾದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬಾಲಕನಿಗೆ ಡಿಕ್ಕಿ ಹೊಡೆದ ಬಳಿಕ ಚಾಲಕ ಟಂಟಂ ಸಮೇತ ಪರಾರಿಯಾಗಿದ್ದಾನೆ.

ಬಾಲಕ ಓಡಿ ಹೋಗುವಾಗ ಅತೀ ವೇಗದಿಂದ ಬಂದ ಟಂಟಂ ಢಿಕ್ಕಿ ಹೊಡೆದೆ ಆತನ ಪ್ರಾಣ ಹೋಗಲು ಕಾರಣವಾಗಿದೆ. ಈ ಢಿಕ್ಕಿಯ ರಭಸಕ್ಕೆ ಬಾಲಕ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಈ ರಸ್ತೆಯಲ್ಲಿ ವೇಗ ನಿಯಂತ್ರಕ ಹಾಕಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ರಸ್ತೆ ತಡೆ ನಡೆಸಿ ಪ್ರತಿಭಟನೆಯನ್ನೂ ಮಾಡಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಬಸವನ ಬಾಗೇವಾಡಿ ಸಿಪಿಐ.ಪಿಎಸ್ ಐ. ಪಿಡಬ್ಲೂಡಿ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಬಸವನ ಬಾಗೇವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply