ಪ್ರಿಯಕರನಿಗೆ ಸುಪಾರಿ ನೀಡಿ ತನ್ನ ತಂದೆಯನ್ನೇ ಹತ್ಯೆ ಮಾಡಿದ ಮಗಳು…!

ಪ್ರಿಯಕರನಿಗೆ ಸುಪಾರಿ ನೀಡಿ ತನ್ನ ತಂದೆಯನ್ನೇ ಮಗಳು ಹತ್ಯೆ ಮಾಡಿಸಿದ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಮಣಿಗನಹಳ್ಳಿಯಲ್ಲಿ ನಡೆದಿದೆ.

ತನ್ನ ಅನೈತಿಕ ಸಂಭಂದಕ್ಕೆ ಅಡ್ಡಿ ಬಂದ ತಂದೆಯ ಹತ್ಯೆಗೆ 15ಲಕ್ಷ ಸುಪಾರಿಕೊಟ್ಟು ಮಗಳು ಕೊಲೆ ಮಾಡಿಸಿದ್ದಾಳೆ.

ಮದುವೆಯಾದ್ರು ಚಿದಾನಂದ ನೊಂದಿಗೆ ಅಕ್ರಮ‌ ಸಂಬಂಧ ಹೊಂದಿದ್ದ ವಿದ್ಯಾ ವಿಚಾರ ತಂದೆ ಮುನಿರಾಜುಗೆ ತಿಳಿದು ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದರಿಂದ ಆಗಾಗ ಜನಗಳ ತಂದೆ ಮಗಳ ನಡುವೆ ಉಂಟಾಗಿದೆ. ತನ್ನ ದಾರಿ ಸಲೀಸಾಗಲು ಮಗಳೇ ತಂದೆಯ ಕೊಲೆ ಮಾಡಿಸಿದ್ದಾಳೆ.

ಪ್ರಿಯಕರ ಚಿದಾನಂದ್ ತನ್ನ ಸ್ನೇಹಿತ ರಘುವಿನೊಂದಿಗೆ ಸೇರಿ ಆಗಸ್ಟ್ 23 ರಂದು ಮುನಿರಾಜು ಹತ್ಯೆ ಮಾಡಿದ್ದಾರೆ. ಬಳಿಕ ಆಲೂರು ತಾಲ್ಲೂಕಿನ ಹೇಮಾವತಿ ಹಿನ್ನೀರಿನಲ್ಲಿ ಮುನಿರಾಜು ಮೃತದೇಹ ಎಸೆದಿದ್ದಾರೆ.

ಕಾರಿನ ಆಕ್ಸ್ ಕೇಬಲ್ ಮತ್ತು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಕೊಲೆ ಬಳಿಕ ವಿದ್ಯಾ ನೇ  ಪೊಲೀಸರಿಗೆ ದೂರು ನೀಡಿದ್ದಾಳೆ.

ವಿದ್ಯಾಳೊಂದಿಗೆ ಸೇರಿ ಕೊಲೆ ಮಾಡಿದ ಆರೋಪಿ ಚಿದಾನಂದನನ್ನು  ಪೊಲೀಸರು ಬಂಧಿಸಿ ಬಾಯಿಬಿಡಿಸಿದ್ದಾರೆ.

 

Leave a Reply