ಪ್ಲಾಟ್ ಫಾರ್ಮ್ ಮೇಲೆ ನುಗ್ಗಿದ ಗೂಡ್ಸ್ ರೈಲು : ಎದ್ನೋ ಬಿದ್ನೋ ಅಂತ ಓಡಿದ ಜನ..!

ಯಾದಗಿರಿ:ನಗರದ ರೈಲ್ವೆ ನಿಲ್ದಾಣದ ರೈಲ್ವೆ ಪ್ಲಾಟ್ ಫಾರ್ಮ್ ಗೆ ಗೂಡ್ಸ್ ರೈಲು ನುಗ್ಗಿ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

ರಸಗೊಬ್ಬರ ಅನ್ ಲೋಡ್ ಮಾಡಲು ಸ್ಟೇಷನ್ ಗೆ ಬಂದಿದ್ದ ಗೂಡ್ಸ್ ರೈಲು, ಗೂಡ್ಸ್ ಯಾರ್ಡ್ ಬಳಿ ರಿವರ್ಸ್ ತೆಗೆದುಕೊಳ್ಳಲು ಲೋಕೋ ಪೈಲೆಟ್ ಮುಂದಾಗಿದ್ರು. ಹಿಂಬದಿ ಸಿಗ್ನಲ್ ನೀಡದ ಹಿನ್ನೆಲೆ ಲೋಕೋ ಪೈಲೆಟ್ ನಿಲ್ದಾಣಕ್ಕೆ ನುಗ್ಗಿಸಿದ್ದಾನೆ.. ಇದ್ರಿಂದಾಗಿ, ಪ್ಲಾಟ್ ಫಾರ್ಮ್ ನಲ್ಲಿದ್ದ ಒಂದು ಮಳಿಗೆಗೆ ಹಾನಿಯಾಗಿದೆ. ರೈಲು ನುಗ್ಗಿದ ರಭಸಕ್ಕೆ ಮಳಿಗೆ ಹತ್ತು ಫೀಟ್ ಮುಂದೆ ಸರಿದಿದೆ..

ಅಂಗಡಿಯಲ್ಲಿದ್ದ ಕೆಲಸಗಾರ ದೇವೇಂದ್ರಪ್ಪ ರೈಲು ಬರುತ್ತಿರೋದನ್ನ ನೋಡಿ ಹೋರ ಓಡಿ ಜೀವ ಉಳಿಸಿಕೊಂಡಿದ್ದಾರೆ.. ರೈಲು ಅಂಗಡಿಗೆ ಗುದ್ದಿದ ರಭಸಕ್ಕೆ ಪ್ಲಾಟ್ ಫಾರ್ಮ್ ನಲ್ಲಿ ನಿಂತಿದ್ದ ಪ್ರಯಾಣಿಕರು ಆತಂಕಗೊಂಡಿದ್ರು..ರೈಲ್ವೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ..

Leave a Reply