ಫೇಸ್‌ಬುಕ್‌ನಲ್ಲಿ ಲೈಕ್ ಜತೆ ರಿಯಾಕ್ಷನ್ ಬಟನ್ ಸೇರ್ಪಡೆ

ಲಂಡನ್: ಫೇಸ್‌ಬುಕ್‌ನಲ್ಲಿ ಅದ್ಯಾವುದೇ ಪೋಸ್ಟ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಲು ಲೈಕ್ ಬಟನ್ ಬಳಸುತ್ತೇವೆ. ಹೀಗೆ ಎಲ್ಲ ಪೋಸ್ಟ್‌ಗಳನ್ನು ಲೈಕ್ ಮಾಡಲಾಗುವುದಿಲ್ಲ, ಡಿಸ್‌ಲೈಕ್ ಬಟನ್ ಕೂಡಾ ಬೇಕು ಎಂದು ನೆಟಿಜನ್‌ಗಳು ಆಗ್ರಹ ವ್ಯಕ್ತ ಪಡಿಸಿದ್ದರು.

ಆದರೆ ಡಿಸ್‌ಲೈಕ್ ಬಟನ್‌ನಿಂದಾಗಿ ಬಳಕೆದಾರರಲ್ಲಿ ಅಸಮಾಧಾನದ ವಾತಾವರಣ ಸೃಷ್ಟಿಯಾಗುತ್ತದೆ ಎಂದು ಫೇಸ್‌ಬುಕ್ ಈಗ ಹೊಸ ರಿಯಾಕ್ಷನ್ ಬಟನ್‌ಗಳನ್ನು ಸೇರ್ಪಡೆ ಮಾಡಿದೆ.

ಲವ್, ಹಹ್ಹ, ವಾವ್, ಸ್ಯಾಡ್, ಆ್ಯಂಗ್ರಿ ಎಂಬ 5 ಬಟನ್‌ಗಳನ್ನು ಫೇಸ್‌ಬುಕ್ ಸೇರ್ಪಡೆ ಮಾಡಿದ್ದು, ನಿಮ್ಮ ಭಾವನೆಗಳನ್ನು ಈ ಬಟನ್ ಮೂಲಕ ವ್ಯಕ್ತ ಪಡಿಸಬಹುದಾಗಿದೆ.

ಪೋಸ್ಟ್ ಗಳು ಇಷ್ಟವಾದರೆ ಲವ್ ಚಿಹ್ನೆಯ ಲವ್ ಬಟನ್, ಹಹ್ಹ ಬಟನ್, ವ್ಹಾವ್ ಬಟನ್ ಅಥವಾ ಬೇಸರವಾದರೆ ಸ್ಯಾಡ್, ಸಿಟ್ಟು ಬಂದರೆ ಆ್ಯಂಗ್ರಿ ಬಟನ್ ಹೀಗೆ ನಿಮ್ಮ ಭಾವನೆಗಳಿಗೆ ಅನುಸಾರವಾಗಿ ಈ ಬಟನ್ ಒತ್ತಬಹುದು.

ಬುಧವಾರ ಈ ಬಟನ್ ಗಳನ್ನು ಪ್ರಕಟಿಸಿದ ಫೇಸ್‌ಬುಕ್ ಸಿಇಒ ಜೂಕರ್‌ಬರ್ಗ್, ಭಾವನೆಗಳನ್ನು ವ್ಯಕ್ತಪಡಿಸುವ ಹೊಸ ಮಾರ್ಗವಾಗಿದೆ ರಿಯಾಕ್ಷನ್ ಬಟನ್. ಪೋಸ್ಟ್ ಗಳು ಖುಷಿಯನ್ನು ವ್ಯಕ್ತ ಪಡಿಸುವುದೇ ಆಗಿರಬೇಕಿಂದಿಲ್ಲ. ಕೆಲವೊಮ್ಮೆ ಕಿರಿಕಿರಿ ಅಥವಾ ದುಃಖದ ಭಾವವನ್ನೂ ವ್ಯಕ್ತ ಪಡಿಸುವುದೂ ಆಗಿರುತ್ತದೆ. ಆದ ಕಾರಣ ಬಳಕೆದಾರರ ಭಾವನೆಗಳಿಗೆ ತಕ್ಕಂತೆ ಪ್ರತಿಕ್ರಿಯಿಸಲು ಈ ಐದು ಹೊಸ ಬಟನ್‌ಗಳನ್ನು ಸೇರ್ಪಡೆ ಮಾಡಲಾಗಿದೆ ಎಂದಿದ್ದಾರೆ.

Comments are closed.