ಬಾಗಲಕೋಟೆಯಲ್ಲಿ ಆತಂಕ ತಂದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ದೂರಿನ ಪತ್ರ…

ಬಾಗಲಕೋಟೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ದೂರಿನ ಪತ್ರ ಸದ್ಯ ಆತಂಕ ಮೂಡಿಸಿದೆ.

ಜಿಲ್ಲೆಯಲ್ಲಿ ಜಮಖಂಡಿ ಪಟ್ಟಣದಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ಕುರಿತು ಶಂಕೆ ವ್ಯಕ್ತಪಡಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಈ ಸಂಭಂದ ಜಿಲ್ಲಾಧಿಕಾರಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದೆ. ಜಮಖಂಡಿ ಪಟ್ಟಣದ ಸಾಂತ್ವನ ಕೇಂದ್ರದ ವಿರುದ್ದ ನಾಲ್ವರು ಸದಸ್ಯರ ಸಮಿತಿ ಆರೋಪ ಮಾಡಿ ಸೆ.೬ರಂದು ಡಿಸಿಗೆ ಪತ್ರ ಬರೆದಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಆರೋಪದ ಹಿನ್ನೆಲೆಯಲ್ಲಿ ವಿಚಾರಣೆ ಆರಂಭಿಸಿದ್ದಾರೆ. ಜಮಖಂಡಿ ಸಾಂತ್ವನ ಕೇಂದ್ರದ ಮುಖ್ಯಸ್ಥೆ ರೇಖಾ ವಿರುದ್ದ  17 ವಷ೯ದ ಬಾಲಕಿಯನ್ನ 7ಲಕ್ಷ ರೂಪಾಯಿಗೆ ಬೇರೆ ರಾಜ್ಯಕ್ಕೆ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪ ಮಾಡಿದೆ ಸಮಿತಿ.

ಅಲ್ಲದೆ ಈ ಮೊದಲು ಮಕ್ಕಳ ಸಾಗಾಣಿಕೆ ಆಗಿರೋ ಬಗ್ಗೆ ಮತ್ತು  ಸಾಂತ್ವನ ಕೇಂದ್ರದಲ್ಲಿದ್ದ ಸಂತ್ರಸ್ಥರನ್ನ ದೈನಂದಿನ ಕೆಲಸಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಸಹ ಕೇಳಿ ಬಂದಿದೆ. ಆರೋಪಿ ರೇಖಾ ಕಾಂತಿ  ಮಾಜಿ ಸಚಿವೆ ಉಮಾಶ್ರೀ, ರಾಮಲಿಂಗಾರೆಡ್ಡಿ ಜೊತೆ ಫೋಟೋ ತಗೆಸಿಕೊಂಡಿರೋದು ವೈರಲ್ ಆಗಿವೆ.

 

Leave a Reply