ಬಾದ್ ಶಾ ಪುತ್ರಿ ಸುಹಾನ ನಟನೆಯ ಮೊದಲ ಕಿರುಚಿತ್ರದ ಟೀಸರ್ ರಿಲೀಸ್…

ಆಗಾಗ ತನ್ನ ಗ್ಲಾಮರಸ್ ಚಿತ್ರಗಳನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳುತ್ತಿದ್ದ ಶಾರುಖ್ ಖಾನ್ ಮತ್ತು ಗೌರಿ ಖಾನ್ ಪುತ್ರಿ ಸುಹಾನ ನಟನೆಯ ಮೊದಲ ಕಿರುಚಿತ್ರದ ಟೀಸರ್ ರಿಲೀಸ್ ಆಗಿದೆ.

ನ್ಯೂಯಾರ್ಕ್ ಅಭ್ಯಾಸ ನಡೆಸುತ್ತಿರುವ ಶಾರುಖ್ ಪುತ್ರಿ ತಮ್ಮ ಹಾಟ್ ಫೋಟೋಗಳಿಂದಲೇ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ ಚೆಲುವೆ. ಯಾವುದೇ ಸಿನಿಮಾದಲ್ಲಿ ನಟಿಸದಿದ್ದರೂ ಸುಹಾನಾ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಈ ಹಿಂದೆ ಬಾಲಿವುಡ್ ಸಿನ್ಮಾದಲ್ಲಿ ಸುಹಾನ ನಟಿಸುತ್ತಿದ್ದಾರೆ ಎಂದು ಸುದ್ದಿಯೊಂದು ಹರಿದಾಡಿತ್ತು. ಈ ಬೆನ್ನಲ್ಲೇ ಸುಹಾನ ನಟನೆಯ ‘ದ ಗ್ರೇ ಪಾರ್ಟ್ ಆಫ್ ಬ್ಲ್ಯೂ’ ಕಿರುಚಿತ್ರದ ಟೀಸರ್ ನ್ನು ನಿರ್ದೇಶಕ ಥಿಯೋಡರ್ ಗಿಮೆನೋ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.

ನನ್ನ ಮುಂದಿನ ‘ದ ಗ್ರೇ ಪಾರ್ಟ್ ಆಫ್ ಲೈಫ್’ ಕಿರುಚಿತ್ರದ ಕೆಲ ದೃಶ್ಯಗಳನ್ನು ಬಿಡುಗಡೆ ಮಾಡುತ್ತಿದ್ದೇನೆ. ಚಿತ್ರದ ಬಹುತೇಕ ಕೆಲಸಗಳು ಅಂತಿಮಗೊಂಡಿದ್ದು, ಬಿಡುಗಡೆ ದಿನಾಂಕ ನಿಗದಿಯಾಗಿಲ್ಲ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಕಿರುಚಿತ್ರ ಬಿಡುಗಡೆ ಮುನ್ನ ಈ ಟೀಸರ್ ಬಿಡುಗಡೆ ಮಾಡಿದ್ದು, ಎಂಜಾಯ್ ಮಾಡಿ ಎಂದು ಗಿಮೆನೋ ಬರೆದುಕೊಂಡಿದ್ದಾರೆ.

ಈ ಹಿಂದೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಶಾರೂಕ್, ಮಕ್ಕಳಾದ ಆರ್ಯನ್ ಮತ್ತು ಸುಹಾನ ಸಿನಿ ಇಂಡಸ್ಟ್ರಿಗೆ ಬರಲಿದ್ದಾರೆ ಎಂದು ಹೇಳಿದ್ದರು. ಆರ್ಯನ್ ನಿರ್ಮಾಪಕ ಮತ್ತು ನಿರ್ದೇಶಕನಾಗಲು ಇಷ್ಟಪಡುತ್ತಾನೆ ಮತ್ತು ಸುಹಾನ ಕಲಾವಿದೆಯಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತಾಳೆ ಎಂದು ಶಾರುಖ್ ತಿಳಿಸಿದ್ದರು.

https://www.instagram.com/theodoregimeno/?utm_source=ig_embed

Leave a Reply