ಬಿಗ್ ಬಾಸ್ ಮನೆಯ ಸದಸ್ಯರಿಗೆ ಬಿಗ್ ಶಾಕ್ ಕೊಟ್ಟ ಚೈತ್ರಾ ಕೋಟೂರು….

ಬಿಗ್ ಬಾಸ್ ಮನೆಗೆ ಚೈತ್ರಾ ಕೋಟೂರು ರೀ-ಎಂಟ್ರಿ ನೀಡಿದ್ದು, ಮನೆಯ ಸದಸ್ಯರು ಶಾಕ್ ಆಗಿದ್ದಾರೆ.

ಮಂಗಳವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಮನರಂಜನೆ ನೀಡಲು ಜಾದೂಗಾರ ಕುದ್ರೋಳಿ ಗಣೇಶ್ ಅವರನ್ನು ಮನೆಗೆ ಕಳುಹಿಸಿದ್ದರು. ಗಣೇಶ್ ಅವರು ಬೆಡ್ ರೂಂ, ಡೈನಿಂಗ್ ಟೇಬಲ್, ಲಿವಿಂಗ್ ಏರಿಯಾದಲ್ಲಿ ಮ್ಯಾಜಿಕ್ ತೋರಿಸಿದ ಬಳಿಕ ಗಾರ್ಡನ್ ಏರಿಯಾದಲ್ಲಿ ಮ್ಯಾಜಿಕ್ ತೋರಿಸುವುದಾಗಿ ಹೇಳಿ ಸ್ಪರ್ಧಿಗಳನ್ನು ಹೊರಗೆ ಕರೆದುಕೊಂಡು ಹೋದರು.

ಗಣೇಶ್ ಮನೆಯ ಮುಖ್ಯದ್ವಾರದ ಬಳಿ ಹೋಗಿ ಮ್ಯಾಜಿಕ್ ಮಾಡಿದ್ದಾರೆ. ಈ ವೇಳೆ ಚೈತ್ರಾ ಕೋಟೂರು ಅಲ್ಲಿ ಪ್ರತ್ಯಕ್ಷವಾಗಿದ್ದಾರೆ. ಚೈತ್ರಾ ಅವರನ್ನು ನೋಡುತ್ತಿದ್ದಂತೆ ಮನೆಯ ಸದಸ್ಯರು ಶಾಕ್ ಆದರು. ಚೈತ್ರಾ ಅವರು ಮನೆಯೊಳಗೆ ಹೋಗುತ್ತಿದ್ದಂತೆ ಗಣೇಶ್ ಅಲ್ಲಿಂದ ಹೊರಟು ಹೋಗಿದ್ದಾರೆ.

ಚೈತ್ರಾ ಮನೆಯೊಳಗೆ ಬಂದ ನಂತರ ನಾನು ಮೊದಲೇ ಹೇಳಿದೆ. ಇಲ್ಲಿ ಯಾವುದು ಶಾಶ್ವತ ಅಲ್ಲ. ಟೈಂ ಬಂದಾಗ ಎಲ್ಲರೂ ಹೋಗಬೇಕು. ಮತ್ತೆ ಟೈಂ ಬಂದಾಗ ಬರಬೇಕು ಎಂದು ಹೇಳಿದ್ದಾರೆ. ಸದ್ಯ ಚೈತ್ರಾ ಮನೆಗೆ ಮತ್ತೆ ಎಂಟ್ರಿ ಕೊಟ್ಟಿರುವುದರಿಂದ ಮನೆಯ ಕೆಲವು ಸದಸ್ಯರು ಶಾಕ್‍ನಲ್ಲಿದ್ದು, ಅವರ ಬಗ್ಗೆಯೇ ಮಾತನಾಡುತ್ತಿದ್ದಾರೆ.

ಸೋಮವಾರವಷ್ಟೇ ವೈಲ್ಡ್ ಕಾರ್ಡ್ ಮೂಲಕ ನಟಿ ರಕ್ಷಾ ಸೋಮಶೇಖರ್ ಅವರು ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಅವರು ಎಂಟ್ರಿ ಕೊಟ್ಟ ಮರುದಿನವೇ ಚೈತ್ರಾ ಕೋಟೂರು ಬಿಗ್ ಬಾಸ್ ಮನೆಗೆ ಮತ್ತೆ ಪ್ರವೇಶಿಸಿದ್ದಾರೆ.

Leave a Reply

Your email address will not be published.