ಬಿಜೆಪಿ ಅಭ್ಯರ್ಥಿ ನಾರಾರಯಣ ಗೌಡ ಮೇಲೆ ಚಪ್ಪಲಿ ಎಸೆತ….!

ಮಂಡ್ಯದ ಕೆ ಆರ್ ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾರಾರಯಣ ಗೌಡ ಅವರ ಮೇಲೆ ಚಪ್ಪಲಿ ಎಸೆಯಲಾಗಿದೆ. ಬಿಜೆಪಿ ಬಾವುಟವನ್ನು ಕಿತ್ತೆಸೆದ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ಇಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಇಂದು ನಾರಾಯಣ ಗೌಡ ನಾಮಪತ್ರ ಸಲ್ಲಿಸಿದ ಬಳಿಕ ಹೊರಬಂದು ಕಾರ್ಯಕರ್ತರು ಹಾಗೂ ಜನರ ಕಡೆಗೆ ಕೈ ಬೀಸುತ್ತಾರೆ. ಈ ವೇಳೆ ಚಪ್ಪಲಿ ಎಸೆಯಲಾಗಿದೆ.

ಮೈತ್ರಿ ಸರ್ಕಾರ ಬೀಳಿಸಿದ ಸಿಟ್ಟಿಗೆ ಹಾಗೂ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅನರ್ಹ ಶಾಸಕನ ವಿರುದ್ಧ ಜೆಡಿಎಸ್ ಬೆಂಬಲಿಗರು ಚಪ್ಪಲಿ ಎಸೆದು ಆಕ್ರೋಶ ಹೊರಹಾಗಿದ್ದಾರೆ. ಜೊತೆಗೆ ನಾರಾಯಣಗೌಡರ ವಿರುದ್ಧ ಘೋಷಣೆ ಕೂಗಿದ್ದಾರೆ.

ಸ್ಥಳದಲ್ಲಿ ಬೆಂಬಲಿಗರನ್ನು ಚದುರಿಸುವಲ್ಲಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

 

Leave a Reply