ಬೆತ್ತಲಾಗಿ ವಿಕೆಟ್ ಕೀಪರ್ ಫೋಸ್ ನೀಡಿದ ವಿಶ್ವದ ಅತ್ಯುತ್ತಮ ಕ್ರಿಕೆಟ್ ಆಟಗಾರ್ತಿ….

ಇಂಗ್ಲೆಂಡ್ ಮಹಿಳಾ ವಿಕೆಟ್ ಕೀಪರ್ ಸಾರಾ ಟೇಲರ್, ವಿಶ್ವದ ಅತ್ಯುತ್ತಮ ಕ್ರಿಕೆಟ್ ಆಟಗಾರರ ಪಟ್ಟಿಯಲ್ಲಿದ್ದಾರೆ. ಮೈದಾನದಲ್ಲಿ ಸಾರಾ ಸಾಕಷ್ಟು ದಾಖಲೆ ಬರೆದಿದ್ದಾರೆ. ವಿಕೆಟ್ ಹಿಂದೆ ನಿಂತು ಅನುಭವಿ ಆಟಗಾರರ ಬೆವರಿಳಿಸಿರುವ ಸಾರಾ ಈಗ ಸುದ್ದಿಯಲ್ಲಿದ್ದಾರೆ. ಮೈದಾನದಲ್ಲಿ ಉತ್ತಮ ಆಟ ಪ್ರದರ್ಶಿಸಿ ಸಾರಾ ಸುದ್ದಿಯಲ್ಲಿಲ್ಲ, ಬದಲಾಗಿ ಮೈದಾನದ ಹೊರಗೆ ಅಭಿಯಾನವೊಂದರ ವಿಷ್ಯಕ್ಕೆ ಸುದ್ದಿಯಲ್ಲಿದ್ದಾರೆ.

ಸಾರಾ ಟೇಲರ್ ಪ್ರಸ್ತುತ ಪ್ರಪಂಚದಾದ್ಯಂತದ ಮಹಿಳೆಯರ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಅಭಿಯಾನವೊಂದರ ಭಾಗವಾಗಿದ್ದಾರೆ. ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅದರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದನ್ನು ಮಾಡುವುದು ಸರಳವಾಗಿರಲಿಲ್ಲ. ಆದ್ರೆ ಅಭಿಯಾನದಲ್ಲಿ ಭಾಗಿಯಾದ ಖುಷಿಯಿದೆ ಎಂದು ಸಾರಾ ಹೇಳಿದ್ದಾರೆ.

ಇಷ್ಟೇ ಅಲ್ಲ ಪ್ರತಿಯೊಬ್ಬ ಮಹಿಳೆಗೂ ತನ್ನ ದೇಹದ ಮೇಲೆ ಪ್ರೀತಿಯಿರಬೇಕು ಎಂದಿದ್ದಾರೆ. ನನ್ನ ದೇಹದಲ್ಲಿ ಯಾವಾಗಲೂ ಕೆಲವು ಸಮಸ್ಯೆಗಳನ್ನು ಹೊಂದಿದ್ದೇನೆ.  ಅಭಿಯಾನದ ಭಾಗವಾಗಲು ಅವುಗಳಲ್ಲಿ ಕೆಲವನ್ನು ನಾನು ಗೆಲ್ಲಬೇಕಾಯ್ತು. ಇದೊಂದು ಪ್ರಜ್ಞಾಪೂರ್ವಕ ಅನುಭವ. ಪ್ರತಿಯೊಬ್ಬ ಹುಡುಗಿ ಸುಂದರವಾಗಿ ಕಾಣ್ತಾಳೆ. ಪ್ರತಿಯೊಬ್ಬ ಮಹಿಳೆ ಸುಂದರವಾಗಿರುತ್ತಾಳೆ ಎಂದು ಶೀರ್ಷಿಕೆ ಹಾಕಿದ್ದಾರೆ.

https://www.instagram.com/sjtaylor30/?utm_source=ig_embed

Leave a Reply

Your email address will not be published.