ಬೈ ಎಲೆಕ್ಷನ್ ಗೆಲ್ಲಲು ಜೆಡಿಎಸ್ ನಾಯಕರಿಂದ ಮಾಸ್ಟರ್ ಪ್ಲ್ಯಾನ್ : “ಸಾಲಮನ್ನಾ” ಅಸ್ತ್ರ ಪ್ರಯೋಗ

ಬೈ ಎಲೆಕ್ಷನ್ ಗೆಲ್ಲಲು ಜೆಡಿಎಸ್ ನಾಯಕರಿಂದ ಮಾಸ್ಟರ್ ಪ್ಲ್ಯಾನ್ ಮಾಡಲಾಗಿದೆ.

ಮೈತ್ರಿ ಸರ್ಕಾರದಲ್ಲಿ ರೈತರ ಸಾಲಮನ್ನಾ ಆಗಿಲ್ಲ ಎಂಬ ವಿಚಾರ ಹೇಳಿ ಸಾಕ್ಷಿಗುಡ್ಡೆ ನೀಡಿ, ಉಪಚುನಾವಣೆಯಲ್ಲಿ ಜನರ ಮನಗೆಲ್ಲಲು “ಸಾಲಮನ್ನಾ” ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಹೌದು..  ಸಾಲಮನ್ನಾ ಯೋಜನೆಯ ಲಾಭ ಪಡೆದ ರೈತರ ಅಂಕಿಅಂಶಗಳ ಬಗ್ಗೆ ಪುಸ್ತಕ ಬಿಡುಗಡೆ ಮಾಡಲಾಗಿದೆ. ಮಾಜಿ ಸಂಸದ ಶಿವರಾಮೇಗೌಡ ರೈತರ ಬೆಳೆ ಸಾಲಮನ್ನಾ ಲಕ್ಷಾಂತರ ರೈತರಿಗೆ ಅನುಕೂಲ ಎಂಬ ಹೆಸರಿನ ಪುಸ್ತಕವನ್ನು ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಪುಸ್ತಕ ಬಿಡುಗಡೆ ಮಾಡಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ರೈತರ ಸಾಲಮನ್ನಾ ಆಗಿಲ್ಲ ಎಂದು ಮಾಧ್ಯಮಗಳು-ಬಿಜೆಪಿ ಸರ್ಕಾರ ಆರೋಪ ಮಾಡ್ತಿವೆ. ಆದ್ರೆ ಲಕ್ಷಾಂತರ ರೈತರು ಸಾಲಮನ್ನಾ ಲಾಭ ಪಡೆದಿದ್ದಾರೆ. ಮಂಡ್ಯ ಜಿಲ್ಲೆ ಒಂದರಲ್ಲೇ ಸಹಕಾರಿ ಬ್ಯಾಂಕ್‌ಗಳಲ್ಲಿ 418.43 ಕೋಟಿ ರೈತರ ಸಾಲಮನ್ನಾ ಆಗಿದೆ. 136ಕೋಟಿ ರೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲಮನ್ನಾ ಆಗಿದೆ. ಜಿಲ್ಲೆಯ 92350 ಮಂದಿ ರೈತರು ಸಾಲಮನ್ನಾದ ಲಾಭ ಪಡೆದಿದ್ದಾರೆ.

ಅಂಕಿಅಂಶವಿರುವ ಪುಸ್ತಕಗಳನ್ನು ಬಿಡುಗಡೆ ಮಾಡಿ ಉಪಚುನಾವಣೆಗೆ ಮೊದಲ ಹಂತದ ತಯಾರಿ ಆರಂಭಿಸಿದೆ ಜೆಡಿಎಸ್. ಹಾಗಾದ್ರೆ ಈ ಪುಸ್ತಕ ಮುಂದಿನ ಚುನಾವಣೆಗೆ ಅದೆಷ್ಟು ಸಹಕಾರಿ ಆಗುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.

Leave a Reply