ಮತ್ತೇ ಪತ್ತೆಯಾಯ್ತು ಜೀತ ಪದ್ಧತಿ : ಇಟ್ಟಿಗೆ ಭಟ್ಟಿಗಳಲ್ಲಿ ಅವ್ಯಾಹತವಾಗಿ ನಡೆದಿದೆ ಜೀತ

ಕೊಪ್ಪಳದಲ್ಲಿ ಜೀತ ಪದ್ಧತಿ ಮತ್ತೇ ಪತ್ತೆಯಾಗಿದೆ. ನವಲಿಯಲ್ಲಿ ಅಮಾನುಷ ಪದ್ಧತಿ ಮಕ್ಕಳ ಸಾವಿನ ಪ್ರಕರಣದಿಂದ ಬೆಳಕಿಗೆ ಬಂದಿದೆ.

ಇಟ್ಟಿಗೆ ಭಟ್ಟಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ  ಜೀತಪದ್ಧತಿ ಬೆಳಕಿಗೆ ಬಂದಿದೆ. ಸುಮಾರು ಮೂರು ತಿಂಗಳ ಹಿಂದಷ್ಟೇ ಗಿಣಗೇರಾದಲ್ಲಿ 9 ಜೀತ ಕಾರ್ಮಿಕರನ್ನು ಮುಕ್ತಗೊಳಿಸಲಾಗಿತ್ತು. ನವಲಿಯಲ್ಲಿ ಸಾವಿಗೀಡಾದ ಮಕ್ಕಳ ಪಾಲಕರನ್ನು ವಿಚಾರಣೆಗೆ ಒಳಪಡಿಸಿದಾಗ ಜೀತ ಕೆಲಸ ಪತ್ತೆಯಾಗಿದೆ.

ಮಹಾರಾಷ್ಟ್ರ ಮೂಲದ ಅವಿನಾಶ್ ಮೇಸ್ತ್ರಿ ಅಲ್ಲಿನ ಎರಡು ಬಡಕುಟುಂಬಗಳನ್ನು ಜೀತಕ್ಕೆ‌ಕರೆ ತಂದಿದ್ದರು. ಜೀತ ಕಾರ್ಮಿಕರು ಹೇಳಿದ ಕೆಲಸ ಮಾಡಿ, ಕೊಟ್ಟಷ್ಟೇ ಹಣ ಪಡೆಯಬೇಕು. ಹೊರ ಜಗತ್ತಿನ ಯಾವ ಸಂಪರ್ಕವನ್ನೂ ಹೊಂದಬಾರದು.

ಕಟ್ಟಿಗೆ ಕಡಿದು ಇಟ್ಟಿಗೆ ಭಟ್ಟಿಗಳಿಗೆ ಕೊಟ್ಟು ಅಡವಿಯ ಜೋಪಡಿಗಳಲ್ಲಿ ಕಾರ್ಮಿಕರು ವಾಸಿಸಬೇಕು. ಶಾಲೆಗೆ ಹೋಗುವ ವಯಸ್ಸಾಗಿದ್ದರೂ ಮಕ್ಕಳು ಸಹ ಕೆಲಸ ಮಾಡಬೇಕು. ನವಲಿ ದುರಂತದಲ್ಲಿ ಮೃತ ಮಕ್ಕಳು ಶಾಲೆಗೆ ಹೋಗಿದ್ದರೆ ಬದುಕುಳಿಯುತ್ತಿದ್ದರು ಎಂದು ಪಾಲಕರ ಅಳಲು ತೋಡಿಕೊಂಡಿದ್ದಾರೆ. ತನಿಖೆ ನಡೆಸಿದ ಬಳಿಕ ಅವಿನಾಶ್ ಮೇಸ್ತ್ರಿ, ಮರಳಿನ ಗುಡ್ಡೆಯ ಜಾಗದ ಮಾಲಕ ಗುರುಪಾದಪ್ಪ ಹಾಗೂ ಮರಳು ಲೀಜ್ ಪಡೆದಿದ್ದ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

Leave a Reply