ಮನಮೋಹನ್, ಚಿದಂಬರಂ ಭಾರತದ ಆರ್ಥಿಕ ಸುಧಾರಣೆಯ ರೂವಾರಿಗಳು ಇನ್ಫೋಸಿಸ್ ಮೂರ್ತಿ

ಭಾರತ ಇಂದು ವಿಶ್ವ ಸಮುದಾಯದಲ್ಲಿ ಆರ್ಥಿಕವಾಗಿ ಸಬಲವಾಗಿರುವುದರ ಹಿಂದೆ ಮಾಜಿ ಪಿಎಂ ಮನಮೋಹನ್ ಸಿಂಗ್ ಅವರ ಶ್ರಮ ಅಪಾರ ಎಂದು ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ವ್ಯಾಪಾರ ವಹಿವಾಟು ಮಾಡುವುದೇ ದುಸ್ತರವಾಗಿದ್ದಂತಹ ಸಂದರ್ಭದಲ್ಲಿ ಮನಮೋಹನ್ ಸಿಂಗ್ ದೇಶದ ಆರ್ಥಿಕತೆಗೆ ಹೊಸ ರೂಪ ನೀಡಿದರು. ಅವರ ದೂರದೃಷ್ಟಿಯ ಫಲವನ್ನು ದೇಶ ಇಂದು ಅನುಭವಿಸುತ್ತಿದೆ ಎಂದು ನಾರಾಯಣ ಮೂರ್ತಿ ವಾಣಿಜ್ಯ ಶೃಂಗದಲ್ಲಿ ಮಾತನಾಡುತ್ತ ಹೇಳಿದ್ದಾರೆ.

ಭಾರತ ದಶಕಗಳ ಕಾಲ ಸಾಧಿಸಲಾಗದ್ದನ್ನು ಮನಮೋಹನ್ ಸಿಂಗ್, ಚಿದಂಬರಂ ಮತ್ತು ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಕೇವಲ ಒಂದು ವಾರದಲ್ಲಿ ಮಾಡಿ ತೋರಿಸಿದ್ದರು.ಇಂದು ದೇಶದಲ್ಲಿ ನಾವು ಕಾಣುತ್ತಿರುವ ಆರ್ಥಿಕ ಬಲಾಢ್ಯತೆಗೆ, ಸುಧಾರಣೆಗೆ ಈ ಮೂವರೇ ರೂವಾರಿಗಳು ಎಂದು ಸಿಂಗ್ ಅವರನ್ನು ನಾರಾಯಣ ಮೂರ್ತಿ ಶ್ಲಾಘಿಸಿದ್ದಾರೆ.

ಈ ಮೂವರ ಜೊತೆಗೆ ದೇಶದ ಆರ್ಥಿಕ ಅಭಿವೃದ್ಧಿಗೆ ಹೊಸ ನಿಶಾನೆ ತೋರಿದವರು ಮಾಜಿ ಪಿಎಂ ನರಸಿಂಹ ರಾವ್ ಅವರು ಎಂದೂ ಮೂರ್ತಿ ಹೇಳಿದ್ದಾರೆ. ಈ ನಾಲ್ವರಿಂದಾಗಿ ಇಂದು ಭಾರತ ಾಥೀ‍್ಕವಾಗಿ ಸಾಕಷ್ಟು ಸುಧಾರಣೆ ಕಾಣಲು ಸಾಧ್ಯವಾಯಿತು ಎಂದೂ ಅವರು ಹೇಳಿದ್ದಾರೆ.

Leave a Reply