ಮನೆ ಮುಂದೆ ಮಾಟ ಮಂತ್ರದ ನಿಂಬೆಹಣ್ಣು ಇಟ್ಟ ಹಿನ್ನಲೆ : ಮಹಿಳೆಗೆ ಬಡಿಗೆಯಿಂದ ಹಲ್ಲೆ

ಮನೆ ಮುಂದೆ ಮಾಟ ಮಂತ್ರದ ನಿಂಬೆಹಣ್ಣು ಇಟ್ಟ ಹಿನ್ನಲೆಯಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿಯಾದ ಘಟನೆ ಬಾಗಲಕೋಟೆ ನಗರದ ವಾಂಬೆ ಕಾಲೋನಿಯಲ್ಲಿ ನಡೆದಿದೆ.

ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಮನೆ ಹೊರಗಡೆ ಬಂದು ಕೂಗಾಡಿದ ಮನೆ ಮಾಲಕಿ ಕಾಶೀಬಾಯಿ ಮತ್ತು ಪಕ್ಕದ ಮನೆ ಮಹಿಳೆ ಮಧ್ಯೆ ಜಗಳ ನಡೆದಿದೆ.

ಈ ವೇಳೆ ಕಾಶೀಬಾಯಿ ಎಂಬ ಮಹಿಳೆಗೆ ಬಡಿಗೆಯಿಂದ ವ್ಯಕ್ತಿ ಹೊಡೆದು ಹಲ್ಲೆ ಮಾಡಿದ್ದಾನೆ. ಕಾಶಿಬಾಯಿ ಮೇಲೆ ಬಡಿಗೆಯಿಂದ ನಾಲ್ವರು ಹಲ್ಲೆ ನಡೆಸಿದ್ದಾರೆ. ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Leave a Reply